ADVERTISEMENT

ಲೋಕಸಭಾ ಚುನಾವಣೆ: 105 ನೂತನ ಸಂಸದರ ವಿದ್ಯಾರ್ಹತೆ 5ರಿಂದ 12ನೇ ತರಗತಿ

ಪಿಟಿಐ
Published 6 ಜೂನ್ 2024, 11:32 IST
Last Updated 6 ಜೂನ್ 2024, 11:32 IST
<div class="paragraphs"><p>ಸಂಸತ್ತು</p></div>

ಸಂಸತ್ತು

   

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಾಗಿ ಹೊರಹೊಮ್ಮಿರುವವರ ಪೈಕಿ 105 ಅಭ್ಯರ್ಥಿಗಳು(ಶೇ 19ರಷ್ಟು) ತಮ್ಮ ಶೈಕ್ಷಣಿಕ ಅರ್ಹತೆ 5ನೇ ತರಗತಿಯಿಂದ 12ನೇ ತರಗತಿ ಎಂದು ಘೋಷಿಸಿದ್ದು, 420 ಅಭ್ಯರ್ಥಿಗಳು(ಶೇ 77 ರಷ್ಟು) ತಮ್ಮ ಶೈಕ್ಷಣಿಕ ಅರ್ಹತೆ ಪದವಿ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌(ಎಡಿಆರ್) ತಿಳಿಸಿದೆ.

ವಿಜೇತ ಅಭ್ಯರ್ಥಿಗಳ ಪೈಕಿ 17 ಅಭ್ಯರ್ಥಿಗಳು ಡಿಪ್ಲೊಮಾ ಪದವೀಧರಾಗಿದ್ದು, 5ನೇ ತರಗತಿಯವರೆಗೆ ಓದಿರುವ ಇಬ್ಬರು ಅಭ್ಯರ್ಥಿಗಳಿದ್ದಾರೆ. ನಾಲ್ವರು 8ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ. 34 ಅಭ್ಯರ್ಥಿಗಳು ತಾವು 10ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು ತಾವು 12ನೇ ತರಗತಿಯವರೆಗೆ ಓದಿರುವುದಾಗಿ ಹೇಳಿದ್ದಾರೆ. ಒಬ್ಬ ಅಭ್ಯರ್ಥಿ ಅಕ್ಷರಸ್ಥ ಎಂದಷ್ಟೇ ಘೋಷಿಸಿರುವುದಾಗಿ ವರದಿ ತಿಳಿಸಿದೆ.

ADVERTISEMENT

ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡ ಎಲ್ಲಾ 121 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ದಾರೆ.

‘ಕೃಷಿ ಹಾಗೂ ಸಮಾಜ ಸೇವೆ 543 ಸಂಸದರ ಸಾಮಾನ್ಯ ವೃತ್ತಿಯಾಗಿದೆ’ ಎಂದು ಮತ್ತೊಂದು ಸಂಶೋಧನಾ ಸಂಸ್ಥೆ ‘ಥಿಂಕ್ –ಟ್ಯಾಂಕ್‌ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್‌’ ತಿಳಿಸಿದೆ.

ಛತ್ತೀಸಗಢದ ಶೇ 91, ಮಧ್ಯಪ್ರದೇಶದ ಶೇ 72 ಮತ್ತು ಗುಜರಾತ್‌ನ ಶೇ 65 ಸಂಸದರು ಕೃಷಿಯನ್ನು ತಾವು ನಿರ್ವಹಿಸುವ ವೃತ್ತಿಗಳಲ್ಲಿ ಒಂದು ಎಂದು ಸೂಚಿಸಿದ್ದಾರೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.