ADVERTISEMENT

'ಒನ್ ರುಪಿ ಕ್ಲಿನಿಕ್'ನಲ್ಲಿ ಕೋವಿಡ್-19ನಿಂದ ಚೇತರಿಸಿಕೊಂಡ 106 ವರ್ಷದ ವೃದ್ಧೆ

ಪಿಟಿಐ
Published 20 ಸೆಪ್ಟೆಂಬರ್ 2020, 13:28 IST
Last Updated 20 ಸೆಪ್ಟೆಂಬರ್ 2020, 13:28 IST
   

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ 106 ವರ್ಷದ ಮಹಿಳೆ ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ವೇಳೆ ವೈದ್ಯರು ಮತ್ತು ದಾದಿಯರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು.

10 ದಿನಗಳ ವಾಸ್ತವ್ಯದ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಹೊರನಡೆಯುವ ಮೊದಲು ಮಹಿಳೆ ಹೆಮ್ಮೆಯಿಂದ ತನ್ನ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಮಾಧ್ಯಮಗಳಿಗೆ ತೋರಿಸಿದರು.

ಡೊಂಬ್ವಿ ಮೂಲದ ನೂರು ವರ್ಷದ ಅಜ್ಜಿ, ಕೋವಿಡ್ ಸೋಂಕಿಗೆ ಒಳಗಾದ ನಂತರ ಈ ಕಾಯಿಲೆಗೆ ತುತ್ತಾದ ನಂತರ, ಆಕೆಯ ವಯಸ್ಸಿನಿಂದಾಗಿ ಯಾವುದೇ ಆಸ್ಪತ್ರೆಯು ಆಕೆಯನ್ನು ದಾಖಲಿಸಿಕೊಳ್ಳಲು ಒಪ್ಪಿರಲಿಲ್ಲ. ಕಳೆದ 10 ದಿನಗಳ ಹಿಂದಷ್ಟೇ ಆಕೆಯು ಕಲ್ಯಾಣ್ ಡೊಂಬ್ವಿ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಸವ್ಲಾರಂ ಕ್ರೀಡಾ ಸಂಕುಲದಲ್ಲಿ (ಕ್ರೀಡಾ ಸಂಕೀರ್ಣ) ಸ್ಥಾಪಿಸಲಾದ ಕೋವಿಡ್-19 ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಯಿತು. ಅಲ್ಲಿನ ವೈದ್ಯರು ಮತ್ತು ವೈದ್ಯಕೀಯ ತಂಡ ಆಕೆಯನ್ನು ಚೆನ್ನಾಗಿ ನೋಡಿಕೊಂಡರು ಎನ್ನುತ್ತಾರೆ ಅಳಿಯ.

ADVERTISEMENT

ಆಕೆಯನ್ನು ಚೆನ್ನಾಗಿ ನೋಡಿಕೊಂಡ ಮತ್ತು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಲು ಸಹಾಯ ಮಾಡಿದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ನಿಜವಾಗಿಯೂ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು.

ಈ ಕೋವಿಡ್-19 ಚಿಕಿತ್ಸಾ ಕೇಂದ್ರವನ್ನು ನಿರ್ವಹಿಸುತ್ತಿರುವ 'ಒನ್ ರುಪಿ ಕ್ಲಿನಿಕ್'ನ ವ್ಯವಸ್ಥಾಪಕ ನಿರ್ದೇಶಕ ಡಾ. ರಾಹುಲ್ ಘುಲೆ, ವೃದ್ಧೆಯು ಚಿಕಿತ್ಸೆಗೆ ಯಶಸ್ವಿಯಾಗಿ ಪ್ರತಿಕ್ರಿಯಿಸಿದ್ದಕ್ಕೆ ನಮಗೆ ಸಂತೋಷವಾಗಿದೆ ಎಂದು ಹೇಳಿದ ಅವರು, ವೃದ್ಧ ಮಹಿಳೆಯನ್ನು ನೋಡಿಕೊಂಡಿದ್ದಕ್ಕಾಗಿ ಅವರ ತಂಡವನ್ನು ಶ್ಲಾಘಿಸಿದರು.

ಜುಲೈ 27 ರಂದು ಆಸ್ಪತ್ರೆಯನ್ನು ತೆರೆಯಲಾಯಿತು ಮತ್ತು ಇದುವರೆಗೆ 1,100 ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿದೆ.

ರೈಲ್ವೆ ಅಪಘಾತ ಸಂತ್ರಸ್ತರಿಗೆ ತುರ್ತು ಸಹಾಯವನ್ನು ಒದಗಿಸಲು ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಕೇಂದ್ರ ರೈಲ್ವೆಯ ಉಪನಗರ ವಿಭಾಗದ ಆಯ್ದ ನಿಲ್ದಾಣಗಳಲ್ಲಿ ಪ್ರತಿ ರೋಗಿಗೆ ₹ 1 ಶುಲ್ಕ ವಿಧಿಸುವ ಒನ್ ರುಪಿ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ.

ಮಹಾರಾಷ್ಟ್ರ ಸಂಪುಟ ಸಚಿವ ಆದಿತ್ಯ ಠಾಕ್ರೆ, ವೃದ್ಧ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿದ್ದಕ್ಕಾಗಿ ಕೆಡಿಎಂಸಿ ಸಿಬ್ಬಂದಿ ಮತ್ತು ಶಿವಸೇನಾದ ಕಲ್ಯಾಣದ ಸಂಸದ ಶ್ರೀಕಾಂತ್ ಶಿಂಧೆ ಅವರನ್ನು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.