ನವದೆಹಲಿ: ಅಮೆರಿಕ ಮತ್ತು ಇತರ ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿಯೂ ತುರ್ತು ಸಹಾಯವಾಣಿಗೆ ಒಂದೇ ಸಂಖ್ಯೆ 112 ಚಾಲನೆ ನೀಡಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ಮಂಗಳವಾರ ಈ ಸೇವೆಗೆ ಚಾಲನೆ ನೀಡಿದ್ದು ಪೊಲೀಸ್ (100), ಅಗ್ನಿಶಾಮಕ ದಳ (101), ಆರೋಗ್ಯ (108), ಮಹಿಳಾ ಸಹಾಯವಾಣಿ (1090)ಗಳ ಹೊರತಾಗಿ ಈ ತುರ್ತು ಸಹಾಯವಾಣಿ ಸೇವೆ ಲಭ್ಯವಾಗಲಿದೆ.
112- ತುರ್ತು ಸಹಾಯವಾಣಿ ಬಗ್ಗೆ
* ತುರ್ತು ಸಂದರ್ಭಗಳಲ್ಲಿ ನಿಮ್ಮ ಫೋನ್‍ನಲ್ಲಿ 112 ಡಯಲ್ ಮಾಡಿ ಇಲ್ಲವೇ ಸ್ಮಾರ್ಟ್ ಫೋನ್‍ನಲ್ಲಿ ಮೂರು ಬಾರಿ ಪವರ್ ಬಟನ್ ಪ್ರೆಸ್ ಮಾಡುವ ಮೂಲಕ ಪ್ಯಾನಿಕ್ ಕಾಲ್ ಮಾಡಬಹುದು.
*ಗೂಗಲ್ ಪ್ಲೇ ಸ್ಟೋರ್/ ಆ್ಯಪಲ್ ಸ್ಟೋರ್‌ನಲ್ಲಿ 112 ಆ್ಯಪ್ ಲಭ್ಯ.ಇನ್‍ಸ್ಟಾಲ್ ಮಾಡಿದ ನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿ ಮೊಬೈಲ್ ಸಂಖ್ಯೆ ನೋಂದಣಿ ಮಾಡಿ.
*ಸ್ಮಾರ್ಟ್ ಫೋನ್ ಅಲ್ಲದೇ ಇದ್ದರೆ ನಿಮ್ಮ ಮೊಬೈಲ್‍ನಲ್ಲಿ5 ಅಥವಾ 9 ಸಂಖ್ಯೆಯನ್ನು ಸ್ವಲ್ಪ ಹೊತ್ತು ಒತ್ತಿ ಹಿಡಿಯಿರಿ.
*10- 12 ನಿಮಿಷದಲ್ಲಿ ಇದಕ್ಕೆ ಪ್ರತಿಕ್ರಿಯೆ ಲಭಿಸುವುದು.6 ತಿಂಗಳೊಳಗೆ ನೀವು ಮಾಡಿದ ತುರ್ತುಕರೆಗಳಿಗೆ ಸ್ಪಂದಿಸಲು ತೆಗೆದುಕೊಳ್ಳುವಅವಧಿ 8 ನಿಮಿಷವಾಗಲಿದೆ.
*ಆಂಧ್ರ ಪ್ರದೇಶ, ಉತ್ತರಾಖಂಡ,ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ , ತೆಲಂಗಾಣ, ತಮಿಳುನಾಡು, ಗುಜರಾತ್, ಪುದುಚ್ಚೇರಿ, ಲಕ್ಷದ್ವೀಪ್, ಅಂಡಮಾನ್, ದಾದರ್ ಮತ್ತು ನಾಗರ್ ಹವೇಲಿ, ದಾಮನ್ ಮತ್ತು ದಿಯು, ಜಮ್ಮು ಕಾಶ್ಮೀರದಲ್ಲಿ ಈ ಸೇವೆ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.