ADVERTISEMENT

2021ರಲ್ಲಿ ನಿತ್ಯ 115 ದಿನಗೂಲಿ ಕಾರ್ಮಿಕರು, 63 ಗೃಹಿಣಿಯರ ಆತ್ಮಹತ್ಯೆ

ಪಿಟಿಐ
Published 20 ಡಿಸೆಂಬರ್ 2022, 13:37 IST
Last Updated 20 ಡಿಸೆಂಬರ್ 2022, 13:37 IST
.
.   

ನವದೆಹಲಿ: ದೇಶದಲ್ಲಿ 2021ರಲ್ಲಿ ಪ್ರತಿನಿತ್ಯ 115 ದಿನಗೂಲಿ ಕಾರ್ಮಿಕರು ಹಾಗೂ 63 ಗೃಹಿಣಿಯರು ಆತ್ಮಹತ್ಯೆಗೆ ಶರಣಾಗಿದ್ದು, ಕಳೆದ ವರ್ಷ ಒಟ್ಟಾರೆ 1,64,033 ಆತ್ಮಹತ್ಯೆಗಳಾಗಿವೆ ಎಂದು ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ನೀಡಿರುವ ಅಂಕಿಅಂಶಗಳನ್ನು ಹಂಚಿಕೊಂಡ ಸಚಿವರು,ಕಳೆದ ವರ್ಷ ಒಟ್ಟು 42,004 ದಿನಗೂಲಿ ಕಾರ್ಮಿಕರು ಮತ್ತು 23,179 ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ20,231 ಸ್ವಉದ್ಯೋಗಿಗಳು, 15,870 ವೇತನದಾರರು, 13,714 ನಿರುದ್ಯೋಗಿಗಳು, 13,089 ವಿದ್ಯಾರ್ಥಿಗಳು, 12,055 ವ್ಯಾಪಾರದಲ್ಲಿ ತೊಡಗಿಸಿಕೊಂಡವರು ಮತ್ತು 11,431 ಖಾಸಗಿ ವಲಯದ ಉದ್ಯಮಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.