ADVERTISEMENT

ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದ 118 ವರ್ಷದ ವೃದ್ಧೆ

ಪಿಟಿಐ
Published 5 ಏಪ್ರಿಲ್ 2021, 1:50 IST
Last Updated 5 ಏಪ್ರಿಲ್ 2021, 1:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್: ಮಧ್ಯಪ್ರದೇಶದ ಸಾಗರ ಜಿಲ್ಲೆಯ 118 ವರ್ಷ ತುಂಬಿರುವ ತುಳಸಾಬಾಯಿ ಎಂಬ ವೃದ್ಧೆ ಭಾನುವಾರ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

ಖಿಮ್ಲಾಸಾ ಪ್ರದೇಶದ ಲಸಿಕಾ ಕೇಂದ್ರದಿಂದ ಲಸಿಕೆ ಪಡೆದು ನಗುಮುಖದಲ್ಲಿ ಹೊರ ಬಂದ ವೃದ್ಧೆ, 118ನೇ ವಯಸ್ಸಿನಲ್ಲಿ ನಾನು ಲಸಿಕೆ ಪಡೆದು ಆರೋಗ್ಯವಾಗಿ ಹೊರಬಂದಿದ್ದೇನೆ. ನೀವೂ ಲಸಿಕೆ ಪಡೆಯಬಹುದು ಎಂದು ಹೇಳಿಕೆ ನೀಡಿದ್ದು, ವಿಜಯದ ಚಿಹ್ನೆ ತೋರಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಕೋವಿಡ್ ಲಸಿಕೆ ಪಡೆದವರ ಪೈಕಿ ತುಳಸಾಬಾಯಿ ಬಹುಶಃ ಅತ್ಯಂತ ಹಿರಿಯರಾಗಿದ್ದಾರೆ.

ಅವರ ಆಧಾರ್ ಕಾರ್ಡ್ ಪ್ರಕಾರ, ತುಳಸಾಬಾಯಿ ಜನವರಿ 1, 1903 ರಂದು ಜನಿಸಿದ್ದು, ಬುಂದೇಲ್‌ಖಂಡ್ ಪ್ರದೇಶದ ಭಾಗವಾಗಿರುವ ಸಾಗರದ ಸದರ್‌ಪುರ ಪ್ರದೇಶದ ನಿವಾಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.