ADVERTISEMENT

ರಾಜಸ್ಥಾನ | ಬಸ್‌– ಟೆಂಪೊ ಡಿಕ್ಕಿ: 8 ಮಕ್ಕಳು ಸೇರಿ 12 ಮಂದಿ ಸಾವು

ಪಿಟಿಐ
Published 20 ಅಕ್ಟೋಬರ್ 2024, 5:20 IST
Last Updated 20 ಅಕ್ಟೋಬರ್ 2024, 5:20 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಜೈಪುರ: ರಾಜಸ್ಥಾನದ ಧೋಲ್‌ಪುರ ಜಿಲ್ಲೆಯಲ್ಲಿ ಬಸ್ ಮತ್ತು ಟೆಂಪೊ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 8 ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದೆ. ಗ್ವಾಲಿಯರ್‌ನಿಂದ ಜೈಪುರಕ್ಕೆ ಹೋಗುತ್ತಿದ್ದ ಸ್ಲೀಪರ್‌ ಕೋಚ್‌ ಬಸ್‌ ಸುಮಿಪುರ ಬಳಿ ಟೆಂಪೊಗೆ ಡಿಕ್ಕಿ ಹೊಡೆದಿದೆ ಎಂದು ಬ್ಯಾರಿ ಪೊಲೀಸ್‌ ಠಾಣೆಯ ಎಸ್‌ಎಚ್‌ಒ ಶಿವಲಹರಿ ಮೀನಾ ಹೇಳಿದ್ದಾರೆ.

ಅಪಘಾತದಲ್ಲಿ ದಂಪತಿ ಮತ್ತು 8 ಮಕ್ಕಳು ಸೇರಿದಂತೆ 12 ಜನರು ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.