ನವದೆಹಲಿ: ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಕಳ್ಳಬೇಟೆಯಿಂದ 126 ಹುಲಿಗಳು ಸತ್ತಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಅಸಾದುದ್ದೀನ್ ಒವೈಸಿ ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರ ನೀಡಿ, ‘ಐದು ವರ್ಷಗಳಲ್ಲಿ ನೈಸರ್ಗಿಕ ಹಾಗೂ ಇತರ ಕಾರಣಗಳಿಂದ 516 ಹುಲಿಗಳು ಮೃತಪಟ್ಟಿವೆ. ಕಳ್ಳಬೇಟೆಯಿಂದ 126 ಹುಲಿಗಳು ಸತ್ತಿರುವುದು ಖಚಿತವಾಗಿದೆ. ಜತೆಗೆ, ಅಸಹಜವಾಗಿ 19 ಹುಲಿಗಳು ಮೃತಪಟ್ಟಿವೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.