ADVERTISEMENT

ಸಂಸತ್: ನೀಟ್‌, ಎನ್‌ಟಿಎ ಕುರಿತ 13 ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 1:49 IST
Last Updated 1 ಜುಲೈ 2024, 1:49 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ನವದೆಹಲಿ: ಆರ್‌ಎಸ್‌ಪಿ ಸಂಸದ ಎನ್‌.ಕೆ.ಪ್ರೇಮಚಂದ್ರನ್‌ ಅವರು ನೀಟ್‌ಗೆ ಸಂಬಂಧಿಸಿದಂತೆ ಮುಂದಿಟ್ಟಿರುವ ತಿದ್ದುಪಡಿಯು ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮೊದಲನೆಯದಾಗಿ ಚರ್ಚೆಗೆ ಬರಲಿದೆ. 

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ನೀಟ್‌ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ತಿದ್ದುಪಡಿಗಳನ್ನು ವಿರೋಧ ಪಕ್ಷಗಳ ಸಂಸದರು ಸಲ್ಲಿಸಿದ್ದಾರೆ. ಇದರಲ್ಲಿ 9 ತಿದ್ದುಪಡಿಗಳು ಲೋಕಸಭೆಯಲ್ಲಿ ಚರ್ಚೆಗೆ ಬರಲಿವೆ. ಸಂಸದರಾದ ಕೆ.ಸಿ.ವೇಣುಗೋಪಾಲ್‌, ಗೌರವ್‌ ಗೊಗೊಯ್, ಡಿ.ವೈಕೊ, ಶಾಫಿ ಪರಂಬಿಲ್ ಮತ್ತು ಜಾನ್‌ ಬ್ರಿಟ್ಟಾಸ್‌ ಅವರು ತಿದ್ದುಪಡಿಗಳನ್ನು ಸಲ್ಲಿಸಿದವರಲ್ಲಿ ಸೇರಿದ್ದಾರೆ.

ADVERTISEMENT

ಒಟ್ಟಾರೆಯಾಗಿ 50 ಸಂಸದರು 323 ತಿದ್ದುಪಡಿಗಳನ್ನು (ಲೋಕಸಭೆಯಲ್ಲಿ 215 ಮತ್ತು ರಾಜ್ಯಸಭೆಯಲ್ಲಿ 108) ಸಲ್ಲಿಸಿದ್ದಾರೆ. ಬೆಲೆಯೇರಿಕೆ, ನಿರುದ್ಯೋಗ, ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳ ಭರ್ತಿ, ಖಾಸಗಿ ವಲಯದ ಕೋಟಾ, ರೈತರ ಸಮಸ್ಯೆಗಳು ಮತ್ತು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ತಿದ್ದುಪಡಿಗಳು ಇದರಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.