ಪಾಟ್ನಾ: ಬಿಹಾರದ ಏಳು ಜಿಲ್ಲೆಗಳ ವಿವಿಧೆಡೆ ಛತ್ ಪೂಜೆಯ ಸಂದರ್ಭದಲ್ಲಿ (ಭಾನುವಾರ–ಸೋಮವಾರ) ಒಟ್ಟು 13 ಜನರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ, ಖಗಾರಿಯಾ, ಸಮಸ್ತಿಪುರ, ಸಹರ್ಸಾ, ದರ್ಬಂಗಾ, ಮುಂಗೇರ್ ಮತ್ತು ಬೇಗುಸರೈಗಳಲ್ಲಿ ಸಾವು ವರದಿಯಾಗಿವೆ ಎಂದು ಬಿಹಾರ ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಸೋಮವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಪಾಟ್ನಾ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 8.15ರ ಸುಮಾರಿಗೆ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಖಗಾರಿಯಾದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ದರ್ಬಂಗಾ ಮತ್ತು ಸಮಸ್ತಿಪುರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ , ಮುಂಗೇರ್, ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಏನಿದು ಛತ್ ಪೂಜೆ?:
ಉತ್ತರ ಭಾರತದ ದಲ್ಲಿ ಛತ್ ಪೂಜೆಯನ್ನು ಆಚರಿಸಲಾಗುತ್ತದೆ. 4 ದಿನಗಳ ಕಾಲ ಆಚರಿಸುವ ಈ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಸೂರ್ಯನಿಗೆ ವಿಶೇಷ ಅರ್ಘ್ಯ ಅರ್ಪಿಸುವುದು ಈ ಹಬ್ಬದ ವಿಶೇಷ. ಈ ಮಹಿಳೆಯರು ಉಪವಾಸವಿದ್ದು, ಸೂರ್ಯಾಸ್ತ ಮತ್ತು ಸೂರ್ಯ ಉದಯದ ಸಮಯದಲ್ಲಿ ಆರ್ಘ್ಯ ಅರ್ಪಿಸುತ್ತಾರೆ. ನದಿಯಲ್ಲಿ ಮೊಣಕಾಲಿನವರೆಗೂ ನೀರಿನಲ್ಲಿ ನಿಂತು ಈ ಹಬ್ಬವಬ್ಬಯ ಆಚರಿಸುವ ಮೂಲಕ ಸೂರ್ಯನಿಗೆ ನಮಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.