ADVERTISEMENT

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಎನ್‌ಕೌಂಟರ್‌: 13 ನಕ್ಸಲರ ಹತ್ಯೆ

ಪಿಟಿಐ
Published 21 ಮೇ 2021, 6:48 IST
Last Updated 21 ಮೇ 2021, 6:48 IST
ನಕ್ಸಲರ ವಿರುದ್ಧದ ಕಾರ್ಯಾಚರಣೆಯೊಂದರ ಪ್ರಾತಿನಿಧಿಕ ಚಿತ್ರ (ಪಿಟಿಐ)
ನಕ್ಸಲರ ವಿರುದ್ಧದ ಕಾರ್ಯಾಚರಣೆಯೊಂದರ ಪ್ರಾತಿನಿಧಿಕ ಚಿತ್ರ (ಪಿಟಿಐ)    

ಮುಂಬೈ: ‘ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಪೊಲೀಸ್‌ ಪಡೆಯ ಸಿ–60 ಕಮಾಂಡೊಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಕನಿಷ್ಠ 13 ನಕ್ಸಲರು ಹತರಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಎಟಪಲ್ಲಿಯ ಕೊಟ್ಟಾಮಿಯಲ್ಲಿ ಮುಂಜಾನೆ 5.30ರ ಸುಮಾರಿಗೆ ನಕ್ಸಲರು ಸಭೆ ಸೇರಿದ್ದ ಸಂದರ್ಭದಲ್ಲಿ ಎನ್‌ಕೌಂಟರ್‌ ನಡೆದಿದೆ’ ಎಂದು ಡಿಐಜಿ ಸಂದೀಪ್‌ ಪಾಟೀಲ್‌ ಅವರು ಮಾಹಿತಿ ನೀಡಿದರು.

‘ನಿಖರ ಮಾಹಿತಿ ಮೇರೆಗೆ ಸಿ–60 ಕಮಾಂಡೊಗಳನ್ನು ಒಳಗೊಂಡ ಪೊಲೀಸ್‌ ಪಡೆಯು ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಈ ವೇಳೆ ನಕ್ಸಲರು ಮೊದಲು ದಾಳಿ ನಡೆಸಿದರು. ಇದಕ್ಕೆ ಪ್ರತಿದಾಳಿಯಾಗಿ ನಡೆದ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತರಾಗಿದ್ದಾರೆ. ಈ ನಡುವೆ ಕೆಲವು ನಕ್ಸಲರು ಅಲ್ಲಿಂದ ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಂಕಿತ್‌ ಗೋಯಲ್‌ ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.