ADVERTISEMENT

ಮುಂಬೈ: ಹೆದ್ದಾರಿ ಕಾಮಗಾರಿ ವೇಳೆ ಕ್ರೇನ್‌ ಕುಸಿತ; ಸ್ಥಳದಲ್ಲೇ 17 ಮಂದಿ ಸಾವು

ಪಿಟಿಐ
Published 1 ಆಗಸ್ಟ್ 2023, 2:18 IST
Last Updated 1 ಆಗಸ್ಟ್ 2023, 2:18 IST
ಘಟನೆ ನಡೆದ ಸ್ಥಳ (ಚಿತ್ರ: ಎಎನ್‌ಐ)
ಘಟನೆ ನಡೆದ ಸ್ಥಳ (ಚಿತ್ರ: ಎಎನ್‌ಐ)   

ಮುಂಬೈ : ಇಲ್ಲಿನ 'ಸಮೃದ್ಧಿ ಎಕ್ಸ್‌ಪ್ರೆಸ್‌ ವೇ' ಮೂರನೇ ಹಂತದ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್‌ ಕುಸಿದು17 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.

'ಥಾಣೆ ಜಿಲ್ಲೆಯ ಶಹಾಪುರ ತಹಸಿಲ್‌ನ ಸರ್ಲಾಂಬೆ ಗ್ರಾಮದ ಬಳಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ– ನಾಗ್ಪುರ ಸಂಪರ್ಕಿಸುವ 701 ಕಿ.ಮೀ ಉದ್ದದ ಸಮೃದ್ಧಿ ಎಕ್ಸ್‌ಪ್ರೆಸ್‌ ವೇ ನಾಗ್ಪುರ, ವಾಶಿಮ್, ವಾರ್ಧಾ, ಅಹ್ಮದ್‌ನಗರ, ಬುಲ್ಧಾನ, ಔರಂಗಾಬಾದ್, ಅಮರಾವತಿ, ಜಲ್ನಾ, ನಾಸಿಕ್ ಮತ್ತು ಥಾಣೆ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹಾದು ಹೋಗುತ್ತದೆ.

ADVERTISEMENT

ಓದಿ : ಮಹಾರಾಷ್ಟ್ರ ಕ್ರೇನ್‌ ಅವಘಡ: ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ಇತ್ತೀಚೆಗೆ ಈ ಮಾರ್ಗವನ್ನು 'ಹಿಂದೂ ಹೃದಯ ಸಾಮ್ರಾಟ್‌ ಬಾಬಾ ಸಾಹೇಬ್‌ ಠಾಕ್ರೆ ಮಹಾರಾಷ್ಟ್ರ ಸಮೃದ್ದಿ ಮಹಾಮಾರ್ಗ' ಎಂದು ಹೆಸರಿಸಲಾಗಿದ್ದು, ಮಾರ್ಗದ ಮೂರನೇ ಮತ್ತು ಕೊನೆಯ ಹಂತದ ಕಾಮಗಾರಿಯನ್ನು ಈ ವರ್ಷದ ಕೊನೆಯಲ್ಲಿ ಮುಗಿಸಲು ಸರ್ಕಾರ ನಿರ್ಧರಿಸಿತ್ತು. ಮಾರ್ಗದ ನಿರ್ಮಾಣ ಜವಾಬ್ದಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ವಹಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.