ADVERTISEMENT

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ವಿಚಾರಣೆ ನಡೆದ ಏಳು ಗಂಟೆಯೊಳಗೆ ಶಿಕ್ಷೆ ಪ್ರಕಟ

14 ವರ್ಷದ ಬಾಲಕನಿಂದ ಅತ್ಯಾಚಾರ

ಪಿಟಿಐ
Published 21 ಆಗಸ್ಟ್ 2018, 19:30 IST
Last Updated 21 ಆಗಸ್ಟ್ 2018, 19:30 IST
   

ಉಜ್ಜೈನಿ: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಹದಿನಾಲ್ಕು ವರ್ಷದ ಬಾಲಕನನ್ನು ಎರಡು ವರ್ಷಗಳವರೆಗೆ ಬಾಲ ನ್ಯಾಯ ಮಂಡಳಿಗೆ ಕಳುಹಿಸಲಾಗಿದೆ. ಈ ಪ್ರಕರಣದ ವಿಚಾರಣೆ ಕೇವಲ ಏಳು ಗಂಟೆಯೊಳಗೆ ಮುಗಿದಿದ್ದು ವಿಶೇಷ.

ಬಾಲ ನ್ಯಾಯ ಮಂಡಳಿಯ ನ್ಯಾಯಧೀಶ ತ್ರಿಪಾಠಿ ಪಾಂಡೆ ಪ್ರಕರಣದ ವಿಚಾರಣೆ ನಡೆಸಿದರು.

ಆಗಸ್ಟ್‌ 15ರಂದು ಈ ಘಟನೆ ನಡೆದಿದ್ದು,ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಬಾಲಕ ಅತ್ಯಾಚಾರ ಎಸಗಿದ್ದ. ಬಾಲಕಿ ಪೋಷಕರ ಬಳಿ ನಡೆದ ಘಟನೆ ವಿವರಿಸಿದ್ದಳು. ಬಾಲಕನ ವಿರುದ್ಧ ದೂರು ದಾಖಲಾಗಿತ್ತು.

ADVERTISEMENT

ಐದು ದಿನಗಳಲ್ಲಿಯೇ ಅಪರಾಧಿಗೆ ಶಿಕ್ಷೆ ನೀಡಲಾಗಿದೆ. ಸೋಮವಾರ ಬೆಳಿಗ್ಗೆ 10.45ಕ್ಕೆ ವಿಚಾರಣೆ ಪ್ರಾರಂಭವಾಯಿತು. ಸಂಜೆ 6 ಗಂಟೆಯೊಳಗೆ ತೀರ್ಪು ನೀಡಲಾಯಿತು ಎಂದುಸರ್ಕಾರಿ ವಕೀಲ ದೀಪೇಂದ್ರ ಮಾಲು ತಿಳಿಸಿದ್ದಾರೆ.

ಪ್ರಕರಣ ನಡೆದ ಐದು ದಿನಗಳಲ್ಲೇ ತೀರ್ಪು ಬಂದಿರುವುದು ಅಪ್ರಾಪ್ತ ನ್ಯಾಯಾಲಯದ ಇತಿಹಾಸದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ.

ಆತ್ಯಾಚಾರ ಮಾಡಿದ ಬಾಲಕನ ವಿರುದ್ಧ ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

ಅತ್ಯಾಚಾರ: ಮರಣದಂಡನೆ

ಮಂದಸೌರ್‌,ಮಧ್ಯಪ್ರದೇಶ: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿ ಮಂಗಳವಾರ ಆದೇಶ ನೀಡಿದೆ.

ಇರ್ಫಾನ್‌ ಅಲಿಯಾಸ್‌ ಭೈಯು (20) ಹಾಗೂ ಆಸಿಫ್‌ (24) ಅಪರಾಧ ಎಸಗಿರುವುದು ಸಾಬೀತಾಗಿದ್ದು, ವಿಶೇಷ ನ್ಯಾಯಾಧೀಶರಾದ ನಿಶಾ ಗುಪ್ತಾ ಅವರು ಈ ತೀರ್ಪು ನೀಡಿದ್ದಾರೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ (ಜೂನ್‌ 26) ಶಾಲೆಯ ಹೊರಗಡೆ ತಂದೆಗಾಗಿ ಕಾಯುತ್ತ ನಿಂತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದ ಅಪರಾಧಿಗಳು, ಬಾಲಕಿಯನ್ನು ಹತ್ಯೆ ಮಾಡಲು ಯತ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.