ADVERTISEMENT

ಪುರಿ ಜಗನ್ನಾಥ ದೇಗುಲ ಜಾತ್ರೆ ವೇಳೆ ಪಟಾಕಿ ಸಿಡಿದು 15 ಮಂದಿಗೆ ಗಾಯ

ಪಿಟಿಐ
Published 30 ಮೇ 2024, 2:40 IST
Last Updated 30 ಮೇ 2024, 2:40 IST
<div class="paragraphs"><p>ಜಗನ್ನಾಥ ದೇಗುಲದ ಜಾತ್ರೆಯ ದೃಶ್ಯ</p></div>

ಜಗನ್ನಾಥ ದೇಗುಲದ ಜಾತ್ರೆಯ ದೃಶ್ಯ

   

ಕಡತ ಚಿತ್ರ (ಪಿಟಿಐ)

ಪುರಿ: ಬುಧವಾರ ನಡೆದ ಒಡಿಶಾದ ಪುರಿ ಜಗನ್ನಾಥ ದೇಗುಲದ ಚಂದನ ಜಾತ್ರಾ ಮಹೋತ್ಸವ ವೇಳೆ ಪಟಾಕಿ ರಾಶಿಯೊಂದು ಸ್ಫೋಟಗೊಂಡು 15 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪೂಜೆ ನಡೆಯುತ್ತಿದ್ದ ನರೇಂದ್ರ ಪುಷ್ಕರಣಿ ಸುತ್ತಲೂ ನೂರಾರು ಜನ ಜಮಾಯಿಸಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಕ್ತರ ಗುಂಪೊಂದು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿತ್ತು. ಈ ವೇಳೆ ಮರದ ತುಂಡೊಂದು ಪಟಾಕಿ ರಾಶಿಗೆ ಬಿದ್ದು, ಸ್ಥಳದಲ್ಲಿರುವವರ ಮೇಲೆ ಪಟಾಕಿಗಳು ಹಾರಿವೆ. ಈ ಪೈಕಿ ಕೆಲವರು ಸ್ವರಕ್ಷಣೆಗಾಗಿ ಪುಷ್ಕರಣಿಗೆ ಹಾರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸೆಯ ಖರ್ಚನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.