ಕಠುವಾ/ಜಮ್ಮು : ಹದಿನೈದು ಮಂದಿ ಶಂಕಿತ ಮಾದಕ ವ್ಯಸನಿಗಳನ್ನು ಜಮ್ಮು– ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಬಹುತೇಕರು ಪಂಜಾಬ್ ಮೂಲದವರು ಎನ್ನಲಾಗಿದೆ. ಕಠುವಾ ಜಿಲ್ಲೆಯ ಚಾಕ್ ಡ್ರಾಬ್ ಖಾನ್ ಮತ್ತು ಬಾದಾಲಾ ಗ್ರಾಮಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಂಕಿತರನ್ನು ಬಂಧಿಸಿದ್ದಾರೆ.
‘ಗ್ರಾಮಗಳಲ್ಲಿ ನೆಲೆಸಲು ಕಾರಣವೇನು ಎಂಬುದಕ್ಕೆಬಂಧಿತರು ಸೂಕ್ತ ಉತ್ತರ ನೀಡಿಲ್ಲ.ಇವರೆಲ್ಲಮಾದಕ ವ್ಯಸನಿಗಳೆಂಬ ಶಂಕೆಯಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.