ಸೋಲ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಬೆಂಬಲಿಸಲು ಉತ್ತರ ಕೊರಿಯಾ ಸುಮಾರು 1500 ಸೈನಿಕರನ್ನು ರಷ್ಯಾಕ್ಕೆ ಕಳುಹಿಸಿದೆ ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕೆ ಮುಖ್ಯಸ್ಥರು ತಿಳಿಸಿದರು.
ಕಳೆದ ವಾರ ರಾಷ್ಟ್ರೀಯ ಗುಪ್ತಚರ ಸೇವೆ (ಎನ್‌ಐಎಸ್) ಉತ್ತರ ಕೊರಿಯಾ ಸೈನಿಕರನ್ನು ಕಳುಹಿಸಿರುವ ಮಾಹಿತಿಯನ್ನು ನೀಡಿತ್ತು.
ಬುಧವಾರ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಎನ್‌ಐಎಸ್ ನಿರ್ದೇಶಕ ಚೋ ಟೈ-ಯಂಗ್ ಅವರು ತಮಗೆ ಈ ಮಾಹಿತಿಯನ್ನು ನೀಡಿರುವುದಾಗಿ ಶಾಸಕರಾದ ಪಾರ್ಕ್ ಸನ್‌ವೋನ್ ಮತ್ತು ಲೀ ಸಿಯೊಂಗ್ ಕ್ವೆನ್ ತಿಳಿಸಿದರು.
ಡಿಸೆಂಬರ್ ವೇಳೆಗೆ ಉತ್ತರ ಕೊರಿಯಾ ಸುಮಾರು 10,000 ಸಾವಿರ ಸೈನಿಕರನ್ನು ರಷ್ಯಾಕ್ಕೆ ಕಳುಹಿಸಲು ಯೋಚಿಸಿದೆ ಎಂದೂ ಪಾರ್ಕ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.