ADVERTISEMENT

ಹಿಮಾಚಲದಲ್ಲಿ ಮುಂದುವರಿದ ಮಳೆ: ರಾಷ್ಟ್ರೀಯ ಹೆದ್ದಾರಿ ಸೇರಿ 156 ರಸ್ತೆಗಳು ಬಂದ್‌

ಪಿಟಿಐ
Published 14 ಸೆಪ್ಟೆಂಬರ್ 2024, 13:12 IST
Last Updated 14 ಸೆಪ್ಟೆಂಬರ್ 2024, 13:12 IST
<div class="paragraphs"><p>ರಾಷ್ಟ್ರೀಯ ಹೆದ್ದಾರಿ ಬಂದ್‌</p></div>

ರಾಷ್ಟ್ರೀಯ ಹೆದ್ದಾರಿ ಬಂದ್‌

   

ಶಿಮ್ಲಾ: ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಶನಿವಾರ ಬೆಳಗ್ಗೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ  ಒಟ್ಟು 156 ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

ಪಾಲಂಪುರ್, ಮಂಡಿ, ಬೈಜನಾಥ್, ಧರ್ಮಶಾಲಾ, ಕುಫ್ರಿ, ಶಿಮ್ಲಾ, ಜೋಗಿಂದರ್ ನಗರ, ನೈನಾ ದೇವಿ, ಕಾಂಗ್ರಾದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರ ಪರಿಣಾಮ ಈ ಭಾಗಗಳಲ್ಲಿ ಎರಡು ಮೂರು ದಿನ ರಸ್ತೆ ಬಂದ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಮುಂದಿನ 48 ಗಂಟೆಗಳಲ್ಲಿ ಬಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಶಿಮ್ಲಾದಲ್ಲಿ 94, ಮಂಡಿಯಲ್ಲಿ 46 ಹಾಗೂ ಕಾಂಗ್ರಾದಲ್ಲಿ 10, ಕುಲ್ಲುವಿನಲ್ಲಿ 03 ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.