ADVERTISEMENT

ಉತ್ತರ ಪ್ರದೇಶ: ಮತಾಂತರ ವಿರೋಧಿ ಕಾಯ್ದೆಯಡಿ 16 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 14:24 IST
Last Updated 13 ಫೆಬ್ರುವರಿ 2023, 14:24 IST
....
....   

ಜೌನ್‌ಪುರ: ಜನರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಮೂರು ಮಹಿಳೆಯರು ಸೇರಿ 16 ಜನರನ್ನು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಮುರದ್‌ಪುರ್‌ ಕೋಟಿ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬದ್ಲಾಪುರದ ಸೇಂಟ್‌ ಝೇವಿಯರ್‌ ಶಾಲೆಯ ವ್ಯವಸ್ಥಾಪಕ ಥಾಮಸ್‌ ಜೋಸೆಫ್‌ ಅವರ ಸಹಾಯಕ ದಿನೇಶ್‌ ಮೌರ್ಯ, ಇತರ ಹಲವರು ಮತಾಂತರ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪ್ರಮೋದ್‌ ಕುಮಾರ್‌ ಎಂಬುವವರು ಭಾನುವಾರ ದೂರು ನೀಡಿದ್ದರು.

ಜೋಸೆಫ್‌ ಮತ್ತು ದಿನೇಶ್‌ ಸೇರಿ ಇತರ ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ಉತ್ತರ ಪ್ರದೇಶ ಅಕ್ರಮ ಮತಾಂತರ ತಡೆ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎಸ್‌ಪಿ ಶೈಲೇಂದ್ರ ಕುಮಾರ್‌ ಸಿಂಗ್‌ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.