ADVERTISEMENT

ವಯನಾಡ್‌ನ ಮತ ಯಾರಿಗೆ?: ಪ್ರಿಯಾಂಕಾ ಸೇರಿ ಕಣದಲ್ಲಿದ್ದಾರೆ 16 ಅಭ್ಯರ್ಥಿಗಳು

ಉಪಚುನಾವಣೆ: ಕಣದಲ್ಲಿದ್ದಾರೆ 16 ಅಭ್ಯರ್ಥಿಗಳು

ಪಿಟಿಐ
Published 12 ನವೆಂಬರ್ 2024, 12:26 IST
Last Updated 12 ನವೆಂಬರ್ 2024, 12:26 IST
<div class="paragraphs"><p>ಪ್ರಿಯಾಂಕಾ ಗಾಂಧಿ ವಾದ್ರಾ</p></div>

ಪ್ರಿಯಾಂಕಾ ಗಾಂಧಿ ವಾದ್ರಾ

   

ಪಿಟಿಐ

ವಯನಾಡ್‌: ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ, ಸಿ‍ಪಿಐನ ಸತ್ಯನ್‌ ಮೊಕೇರಿ ಹಾಗೂ ಬಿಜೆಪಿಯ ನವ್ಯಾ ಹರಿದಾಸ್‌ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು ಬುಧವಾರ ಇಲ್ಲಿ ಮತದಾನ ನಡೆಯಲಿದೆ.

ADVERTISEMENT

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕಾರಣದಿಂದಾಗಿ ವಯನಾಡ್‌ ಲೋಕಸಭಾ ಕ್ಷೇತ್ರ ತೆರವಾಗಿತ್ತು.

ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ಈ ಕ್ಷೇತ್ರದಿಂದ 3.5 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈಗ ರಾಹುಲ್‌ ಸಹೋದರಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ. 

ಅತ್ತ ಬಿಜೆಪಿ ಹಾಗೂ ಸಿಪಿಐ ಪಕ್ಷಗಳು ಕಾಂಗ್ರೆಸ್‌ನಿಂದ ಈ ಕ್ಷೇತ್ರವನ್ನು ಕಸಿದುಕೊಳ್ಳುವ ತವಕದಲ್ಲಿದೆ. ಸೋಮವಾರ ಉಪಚುನಾವಣೆಯ ಪ್ರಚಾರಕ್ಕೆ ಕೊನೇ ದಿನವಾಗಿತ್ತು. ಮೂರೂ ಪ್ರಮುಖ ಪಕ್ಷಗಳು ಕೊನೇ ದಿನದ ಪ್ರಚಾರದಲ್ಲಿ ಭಾರಿ ರೋಡ್‌ ಶೋ ನಡೆಸಿದವು.

ರಾಹುಲ್‌ ನಾಮವೇ ಬಲ

2019ರಿಂದ 2024ರವರೆಗೆ ರಾಹುಲ್‌ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 

ರಾಹುಲ್‌ ಅವರು ವಯನಾಡ್‌ ಕ್ಷೇತ್ರವನ್ನು ಕೈಬಿಟ್ಟು ರಾಯ್‌ಬರೇಲಿಯನ್ನು ಉಳಿಸಿಕೊಂಡರು ಎನ್ನುವ ಕುರಿತು ಬಿಜೆಪಿ ಹಾಗೂ ಸಿಪಿಐ ಪ್ರಚಾರ ನಡೆಸುತ್ತಿವೆ. ಗೆದ್ದ ಬಳಿಕ, ರಾಹುಲ್‌ ಅವರಂತೆ ಅವರ ಸಹೋದರಿ ಪ್ರಿಯಾಂಕಾ ಕೂಡ ವಯನಾಡ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂದೂ ಪ್ರಚಾರ ನಡೆಸುತ್ತಿವೆ.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಅವರು, ‘ನೀವು (ವಯನಾಡ್‌ ಜನರು) ಇಲ್ಲಿಗೆ ಬರಬೇಡಿ ಎಂದು ಹೇಳುವವರೆಗೂ ನಾನು ಇಲ್ಲಿಗೆ ಬರುತ್ತಲೇ ಇರುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.