ADVERTISEMENT

Wayanad Landslides: ಇನ್ನೂ ಪತ್ತೆಯಾಗದ 119 ಮಂದಿ

ಪಿಟಿಐ
Published 20 ಆಗಸ್ಟ್ 2024, 15:33 IST
Last Updated 20 ಆಗಸ್ಟ್ 2024, 15:33 IST
<div class="paragraphs"><p>ಪಿಣರಾಯಿ ವಿಜಯನ್‌</p></div>

ಪಿಣರಾಯಿ ವಿಜಯನ್‌

   

(ಪಿಟಿಐ ಚಿತ್ರ)

ತಿರುವನಂತಪುರಂ: ‘ಜುಲೈ 30ರಂದು ವಯನಾಡ್‌ನಲ್ಲಿ ನಡೆದ ಗುಡ್ಡ ಕುಸಿತದಲ್ಲಿ 17 ಕುಟುಂಬಗಳ 65 ಮಂದಿ ಕಣ್ಮರೆಯಾಗಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. 

ADVERTISEMENT

‘ಇದುವರೆಗೂ ಗುರುತಿಸಲಾದ 179 ಮೃತದೇಹಗಳ ಪೈಕಿ ಐದು ಮಂದಿ ಅವಲಂಬಿತರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮೃತಪಟ್ಟ 59 ಮಂದಿ ಅವಲಂಬಿತರಿಗೆ ಸರ್ಕಾರದಿಂದ ತಲಾ ₹6 ಲಕ್ಷ ಆರ್ಥಿಕ ನೆರವು ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಭೂಕುಸಿತದಿಂದ 119 ಮಂದಿ ಈಗಲೂ ಕಣ್ಮರೆಯಾಗಿದ್ದಾರೆ. 91 ಮಂದಿ ಸಂಬಂಧಿಕರ ಡಿಎನ್‌ಎ ಸ್ಯಾಂಪಲ್ಸ್‌ ಸಂಗ್ರಹಿಸಲಾಗಿದ್ದು, ಅದನ್ನು ಹೊಂದಾಣಿಕೆ ಮಾಡಿ ನೋಡುವ ಕೆಲಸವು ಪ್ರಗತಿಯಲ್ಲಿದೆ’ ಎಂದು ವಿವರಿಸಿದ್ದಾರೆ. 

‘ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವವರಿಗೆ ತಾತ್ಕಾಲಿಕ ನೆಲೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ತಜ್ಞರು, ಸ್ಥಳೀಯರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ ಪುನರ್‌ವಸತಿ ಯೋಜನೆಯನ್ನು ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.