ADVERTISEMENT

ಬೇರೆ ಪಂಗಡದ ಯುವಕನ ಜತೆ ಓಡಿ ಹೋದ ಯುವತಿಗೆ ಥಳಿಸಿ, ಮೆರವಣಿಗೆ ನಡೆಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 7:33 IST
Last Updated 4 ಸೆಪ್ಟೆಂಬರ್ 2019, 7:33 IST
ವಿಡಿಯೊ ದೃಶ್ಯ
ವಿಡಿಯೊ ದೃಶ್ಯ   

ಭೋಪಾಲ್: ಬೇರೆ ಪಂಗಡದ ಯುವಕನನ್ನು ಪ್ರೀತಿಸಿ ಆತನ ಜತೆ ಓಡಿ ಹೋದ 19 ಹರೆಯದ ಯುವತಿಗೆ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವ ಘಟನೆ ಮಧ್ಯ ಪ್ರದೇಶದ ಅಲಿರಾಜಪುರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಗಂಡಸರ ಗುಂಪೊಂದು ಯುವತಿಗೆ ಹೊಡೆಯುತ್ತಾಮೆರವಣಿಗೆ ನಡೆಸುತ್ತಿರುವ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬಡಿಗೆಯಿಂದ ಯುವತಿಗೆ ಹೊಡೆಯುತ್ತಾ ಆಕೆಯನ್ನು ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. 1 ನಿಮಿಷ 42 ಸೆಕೆಂಡ್ ಅವಧಿಯ ಈ ವಿಡಿಯೊದಲ್ಲಿ ಯುವತಿ ಕ್ಷಮಿಸಿ ಎಂದು ಬೇಡುತ್ತಿರುವುದು ಕಾಣಿಸುತ್ತದೆ.ಆ ರಸ್ತೆಯಲ್ಲಿ ಸಾಗುತ್ತಿರುವ ಜನರು ಇದನ್ನು ನೋಡಿಯೂ ಪ್ರತಿಕ್ರಿಯಿಸದೆ ಮುಂದೆ ಸಾಗುತ್ತಿದ್ದು,ಹೊಡೆತದಿಂದ ತಪ್ಪಿಸಿಕೊಳ್ಳಲು ಆಕೆ ವೇಗವಾಗಿ ನಡೆಯುತ್ತಿರುವುದು ಕಾಣಿಸುತ್ತದೆ.

ADVERTISEMENT

ವಾಟ್ಸ್‌ಆ್ಯಪ್ ಮೂಲಕ ನಮಗೆ ಈ ವಿಡಿಯೊ ಸಿಕ್ಕಿದೆ. ಇದು ಅಂಬುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತೆಮಾಚಿ ಗ್ರಾಮದಲ್ಲಿ ನಡೆದ ಘಟನೆ ಎಂದು ಕೆಲವು ಗ್ರಾಮಸ್ಥರು ಹೇಳಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ದೂರು ಸಿಗಲಿಲ್ಲ. ಯುವತಿಯ ಕಡೆಯಿಂದ ದೂರು ಸಿಕ್ಕಿದರೆ ಮಾತ್ರ ದೋಷಿಗಳ ವಿರುದ್ಧ ಕ್ರಮ ಜರುಗಿಸಲು ನಮಗೆ ಸಾಧ್ಯ ಎಂದು ಅಲಿರಾಜ್‌ಪುರ್ ಎಸ್‌ಪಿ ವಿಪುಲ್ ಶ್ರೀವಾಸ್ತವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.