ನವದೆಹಲಿ: ಅರಮನೆ ನಗರಿ ಮೈಸೂರು ಮತ್ತೊಮ್ಮೆ ಭಾರತದ ‘ನಂ. 1 ಸ್ವಚ್ಛ ನಗರ’ ಎಂಬ ಕೀರ್ತಿಗೆ ಪಾತ್ರವಾಗಿದೆ.
‘ಸ್ವಚ್ಛ ಭಾರತ ಅಭಿಯಾನದ’ ಭಾಗವಾಗಿ, ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಆಧರಿಸಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ದೇಶದ 73 ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ನಂ.1 ಸ್ಥಾನ ಲಭಿಸಿದೆ.
10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶದ 53 ನಗರಗಳು ಮತ್ತು 22 ರಾಜಧಾನಿಗಳನ್ನು ಈ ಬಾರಿ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಮೊದಲ 10 ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಮೈಸೂರು, ಚಂಡೀಗಡ, ತಿರುಚನಾಪಳ್ಳಿ, ನವದೆಹಲಿ ಮಹಾನಗರ ಪಾಲಿಕೆ, ವಿಶಾಖಪಟ್ಟಣ, ಸೂರತ್, ರಾಜ್‌ಕೋಟ್, ಗ್ಯಾಂಗ್ಟಕ್ ಪಿಂಪ್ರಿ ಚಿಂದ್‌ವಾಡ್ ಮತ್ತು ಗ್ರೇಟರ್‌ಮುಂಬೈ ನಗರಗಳಿವೆ. 73 ನಗರಳಲ್ಲಿ ಕೊನೆಯ ಸ್ಥಾನದಲ್ಲಿ ಜಾರ್ಖಂಡ್‌ನ ಧನ್‌ಬಾದ್ ಕೊನೆಯ ಸ್ಥಾನದಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿ ಈ ಪಟ್ಟಿಯಲ್ಲಿ 65ನೇ ಸ್ಥಾನ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.