ಲಖನೌ: ‘ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಐಎಸ್ ಪ್ರೇರಿತ ಉಗ್ರ ಸಂಘಟನೆ ಸ್ಥಾಪನೆಗೆ ಮುಂದಾಗಿದ್ದ ಆರೋಪದಡಿ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಿಳಿಸಿದೆ.
ಎಎಂಯುನ ಹಳೆಯ ವಿದ್ಯಾರ್ಥಿ, ಪ್ರಯಾಗ್‌ರಾಜ್ ಮೂಲದ ಅಮಾಸ್ ಅಹ್ಮದ್ ಅಲಿಯಾಸ್ ಫರಾಜ್ ಅಹ್ಮದ್ ಎಂಬುವರನ್ನು ಎಟಿಎಸ್ ಅಧಿಕಾರಿಗಳು ಸೋಮವಾರ ಬಂಧಿಸಿದ್ದರು. ವಿ.ವಿಯಲ್ಲಿ ಸಮಾಜಕಾರ್ಯ (ಎಂಎಸ್‌ಡಬ್ಲ್ಯು) ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಸಂಭಾಲ್ ಮೂಲದ ಅಬ್ದುಲ್ ಸಮದ್ ಮಲಿಕ್ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ.
‘ಇಬ್ಬರೂ ಐಎಸ್ ಸಿದ್ದಾಂತದಿಂದ ಪ್ರಭಾವಿತರಾಗಿ ದೇಶದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸಲು ಯೋಜಿಸಿದ್ದರು’ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.