ADVERTISEMENT

ದೆಹಲಿ: ಬಂದೂಕು ತೋರಿಸಿ ₹1 ಕೋಟಿ ನಗದು ದರೋಡೆ

ಪಿಟಿಐ
Published 16 ಸೆಪ್ಟೆಂಬರ್ 2023, 2:13 IST
Last Updated 16 ಸೆಪ್ಟೆಂಬರ್ 2023, 2:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ: ಪಿಟಿಐ

ನವದೆಹಲಿ: ಬಂದೂಕು ತೋರಿಸಿ ಇಬ್ಬರಿಂದ ಒಂದು ಕೋಟಿ ರೂಪಾಯಿ ದರೋಡೆ ಮಾಡಿದ ಘಟನೆ ಉತ್ತರ ದೆಹಲಿಯ ಗುಲಾಬಿ ಬಾಗ್‌ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ADVERTISEMENT

ಎರಡು ಬೈಕ್‌ನಲ್ಲಿ ಬಂದ ನಾಲ್ವರು ಈ ಕೃತ್ಯ ಎಸಗಿದ್ದಾರೆ.‌

ಈ ಬಗ್ಗೆ ಮೋತಿ ನಗರ ನಿವಾಸಿ ಸುರೇಶ್ (31) ಎಂಬವರು ದೂರು ದಾಖಲಿಸಿದ್ದಾರೆ. ಕಮಲೇಶ್‌ ಎಂಬವರು ಬುಧವಾರ 1 ಕೋಟಿ ರೂಪಾಯಿಯನ್ನು ಎರಡು ಚೀಲಗಳಲ್ಲಿ ತುಂಬಿ ಚಾಂದಿನಿ ಚೌಕ್‌ಗೆ ತಲುಪಿಸಲು ನಿರ್ದೇಶಿಸಿದ್ದರು ಎಂದು ಉಪ ಪೊಲೀಸ್‌ ಆಯುಕ್ತ (ಉತ್ತರ) ಸಾಗರ್ ಸಿಂಗ್‌ ಕಲ್ಸಿ ಹೇಳಿದ್ದಾರೆ.

ಸುರೇಶ್‌ ಅವರು ರಾಕೇಶ್‌ ಎಂಬವರೊಂದಿಗೆ ಈ ಹಣದ ಚೀಲಗಳೊಂದಿಗೆ ಆಟೋ ಮೂಲಕ ಸಂಜೆ 3.30ರ ವೇಳೆಗೆ ಚಾಂದಿನಿ ಚೌಕ್‌ಗೆ ತೆರಳುತ್ತಿದ್ದರು. ವೀರ್‌ ಬಂದ ಬೈರಾಗಿ ಮಾರ್ಗದ ಮೆಟ್ರೊ ಪಿಲ್ಲರ್‌ ಸಂಖ್ಯೆ 147 ಬಳಿ ತಲುಪಿದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಬಂದೂಕು ತೋರಿಸಿ ಹಣ ದೋಚಿದ್ದಾರೆ. ಬಳಿಕ ಪ್ರತಾಪ್‌ ನಗರ ಮೆಟ್ರೊ ನಿಲ್ದಾಣದ ಕಡೆ ಓಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.