ಹೈದರಾಬಾದ್: ವ್ಯಾಪಾರಿಯೊಬ್ಬರು ಬೈಕ್ನಲ್ಲಿರಿಸಿದ್ದ ಸುಮಾರು ₹ 20 ಲಕ್ಷ ಮೊತ್ತದ ಚಿನ್ನ, ಬೆಳ್ಳಿ ಮತ್ತುನಗದುಕದ್ದು ಪರಾರಿಯಾದ ಘಟನೆಗುರುವಾರ ಬೆಳಿಗ್ಗೆತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಅಂಗಡಿಯಮಾಲೀಕ ಬ್ಯಾಗ್ನ್ನು ಬೈಕ್ನಲ್ಲಿರಿಸಿ ಅಂಗಡಿಯಬಾಗಿಲುತೆರೆಯಲುಮುಂದಾದಾಗಹಿಂದಿನಿಂದ ಬೈಕ್ನಲ್ಲಿ ಬಂದ ಇಬ್ಬರುದುಷ್ಕರ್ಮಿಗಳುಬ್ಯಾಗ್ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯು ಅಂಗಡಿಯಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
300ಗ್ರಾಂಚಿನ್ನ ಮತ್ತು 13ಕೆ.ಜಿಬೆಳ್ಳಿ ಮತ್ತು ₹ 2 ಲಕ್ಷ ನಗದು ಕಳೆದುಕೊಂಡಿರುವುದಾಗಿಅಂಗಡಿಯಮಾಲೀಕರು ಮಾಧ್ಯಮದವರಿಗೆ ತಿಳಿಸಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
ಹೈದರಾಬಾದ್ನಿಂದಸುಮಾರು 160ಕಿ.ಮಿದೂರದಲ್ಲಿರುವ ನಿಜಾಮಾಬಾದ್ನ ಡಿಚ್ಪಲ್ಲಿಯಲ್ಲಿ ಘಟನೆ ನಡೆದಿದ್ದು ಪೊಲೀಸರುತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.