ADVERTISEMENT

2014ರಲ್ಲಿ 5,650 ರೈತರ ಆತ್ಮಹತ್ಯೆ

ಕಂಗೆಡಿಸಿದ ಸಾಲಬಾಧೆ, ಬೆಳೆಹಾನಿ

ಶೆಮಿಜ್‌ ಜಾಯ್‌
Published 22 ಜುಲೈ 2015, 19:30 IST
Last Updated 22 ಜುಲೈ 2015, 19:30 IST

ನವದೆಹಲಿ: ಸಾಲಬಾಧೆ ಹಾಗೂ ಬೆಳೆಹಾನಿಯಿಂದಾಗಿ ದೇಶದಲ್ಲಿ ಕಳೆದ ವರ್ಷ ಮೂರನೇ ಒಂದರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಈ ಪೈಕಿ ಶೇ 20.6ರಷ್ಟು ಮಂದಿ ಸಾಲ ಬಾಧೆಯಿಂದ  (1,163 ಪ್ರಕರಣ)ಹಾಗೂ ಶೇ16.8ರಷ್ಟು (952ಪ್ರಕರಣ) ಜನ ಬೆಳೆನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು
‘2014ರಲ್ಲಿ ಭಾರತದಲ್ಲಿ ಆಕಸ್ಮಿಕ ಸಾವು ಮತ್ತು ಆತ್ಮಹತ್ಯೆ’ ಕುರಿತ ವರದಿಯಲ್ಲಿ ತಿಳಿಸಲಾಗಿದೆ.

ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಛತ್ತೀಸಗಡದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 965 ಮಂದಿ ಬೆಳೆಸಾಲ  ಹಾಗೂ  22 ಜನ ಕೃಷಿ ಸಲಕರಣೆಗೆ ತೆಗೆದುಕೊಂಡ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 176 ಮಂದಿ ಕೃಷಿಯೇತರ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲ ವಿಭಾಗಗಳಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ.

ವರದಿ ಪ್ರಕಾರ, ಮಹಾರಾಷ್ಟ್ರದಲ್ಲಿ 857 ಮಂದಿ,  ತೆಲಂಗಾಣದಲ್ಲಿ 172 ಹಾಗೂ ಕರ್ನಾಟಕದಲ್ಲಿ 51ಮಂದಿ  ಸಾಲ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.