ADVERTISEMENT

2015–16ನೇ ಸಾಲಿನ ಬಜೆಟ್ ಪ್ರಮುಖಾಂಶಗಳು...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 11:35 IST
Last Updated 28 ಫೆಬ್ರುವರಿ 2015, 11:35 IST

ನವದೆಹಲಿ (‍ಪಿಟಿಐ/ಐಎಎನ್ಎಸ್): ಎಲ್ಲರ ಕುತೂಹಲದ ಖನಿ, ನಿರೀಕ್ಷೆಯ ಕ್ಷಣವಾಗಿದ್ದ 2015–16ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್ ಪ್ರಮುಖಾಂಶಗಳು ಇಂತಿವೆ.

* ಕರ್ನಾಟಕದಲ್ಲಿ ಐಐಟಿ ಸ್ಥಾಪನೆ

* ವೈಯಕ್ತಿಕ ಆದಾಯ ತೆರಿಗೆ ಯಥಾಸ್ಥಿತಿ

* ಮಹಿಳೆಯರಿಗೆ 79,258 ಕೋಟಿ ರೂಪಾಯಿ

* ಪರಿಶಿಷ್ಟ ಜಾತಿಗೆ 30,851 ಕೋಟಿ ರೂಪಾಯಿ

ADVERTISEMENT

* ಪರಿಶಿಷ್ಟ ಪಂಗಡಕ್ಕೆ  19,980 ಕೋಟಿ ರೂಪಾಯಿ

* 2015–16ರಲ್ಲಿ ಕೃಷಿ ಸಾಲ ಗಾತ್ರ 8.5 ಲಕ್ಷ ರೂಪಾಯಿ

*ನಿರ್ಭಯಾ ನಿಧಿ ಗಾತ್ರ 1000 ಕೋಟಿಯಿಂದ 2 ಸಾವಿರ ಕೋಟಿಗೆ ಹೆಚ್ಚಳ

*ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕಾರ್ಪೊರೇಟ್ ತೆರಿಗೆ ಶೇ 5 ರಷ್ಟು ಕಡಿತ

* ಸಂಪತ್ತು ತೆರಿಗೆ ಕೈಬಿಟ್ಟ ಸರ್ಕಾರ. ಬದಲಿಗೆ ಭಾರಿ ಶ್ರೀಮಂತರಿಗೆ ಶೇ 2 ರಷ್ಟು ಹೆಚ್ಚುವರಿ ತೆರಿಗೆ

* 1 ಕೋಟಿ ರೂಪಾಯಿಗೂ ಹೆಚ್ಚಿನ ಆದಾಯದ ಮೇಲಿನ ತೆರಿಗೆ ಈಗಿನ ಶೇ 10ರಿಂದ 12ಕ್ಕೆ ಏರಿಕೆ

* ಕಪ್ಪುಹಣ ತಡೆಗೆ ಕಠಿಣ ಕಾನೂನು

* ಮುಂದಿನ ಏಳು ವರ್ಷಗಳಲ್ಲಿ 1,75,000 ಮೆಗಾ ವ್ಯಾಟ್ ಸಾಮರ್ಥ್ಯದ ನವೀಕರಿಸಬಲ್ಲ ಇಂಧನ ಉತ್ಪಾದನೆ ಗುರಿ

* ಸ್ವಚ್ಛ ಭಾರತ, ಗಂಗಾ ಶುದ್ಧೀಕರಣ ಯೋಜನೆ ಮೇಲಿನ ಹೂಡಿಕೆಗೆ ಶೇ 100 ರಷ್ಟು ತೆರಿಗೆ ವಿನಾಯ್ತಿ

* ಸೇವಾ ತೆರಿಗೆ ಶೇಕಡ 12.36ರಿಂದ ಶೇ 14ಕ್ಕೆ ಏರಿಕೆ

* ನೇರ ತೆರಿಗೆ ನೀತಿಗೆ ಸಂಹಿತೆ (ಡಿಟಿಸಿ) ಕೈಬಿಟ್ಟ ಸರ್ಕಾರ

* ತೆರಿಗೆ ತಪ್ಪಿಸುವ ಪ್ರವೃತ್ತಿಯನ್ನು ತಡೆಯುವ ಕಾಯ್ದೆ (ಜಿಎಎಆರ್) ಅನುಷ್ಠಾನ 2 ವರ್ಷ ವಿಳಂಬ

* ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕಾರ್ಪೊರೇಟ್ ತೆರಿಗೆ ಶೇಕಡ 30ರಿಂದ 25ಕ್ಕೆ ಇಳಿಕೆ

* 1 ಲಕ್ಷ ರೂಪಾಯಿಗೂ ಮೇಲ್ಪಟ್ಟ ಆಸ್ತಿ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ

* 20 ಸಾವಿರ ರೂಪಾಯಿಗೂ ಹೆಚ್ಚಿನ ಸ್ಥಿರಾಸ್ತಿ ಖರೀದಿಯ ನಗದು ವ್ಯವಹಾರಕ್ಕೆ ನಿರ್ಬಂಧ

* 22 ಸರಕುಗಳ ಮೇಲಿನ ಸೀಮಾ ಸುಂಕ ಇಳಿಕೆ

* ಸ್ಟಾರ್ಟ್ ಅಪ್ ಕಂಪೆನಿಗಳು, ಉದ್ಯಮಿಗಳ ಉತ್ತೇಜನಕ್ಕೆ 1000 ಕೋಟಿ ರೂಪಾಯಿ ನಿಧಿ

* ಪರ್ಯಾಯ ಹೂಡಿಕೆಗೆ ನಿಧಿಯಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ ಅವಕಾಶ

* ಆಂಧ್ರ ಪ್ರದೇಶದಂತೆ ಬಿಹಾರ ಹಾಗೂ ಪಶ್ಚಿಮ ಬಂಗಾಳಕ್ಕೆ ವಿಶೇಷ ಆರ್ಥಿಕ ನೆರವು

* ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಏಮ್ಸ್ ಸ್ಥಾಪನೆ

* 150 ಕೋಟಿ ರೂಪಾಯಿ ಆರಂಭಿಕ ಮೊತ್ತದಲ್ಲಿ ವಿಶ್ವ ದರ್ಜೆ ಐಟಿ ವಲಯ ಸ್ಥಾಪನೆ

* ಆಗಮನದ ಬಳಿಕ ವೀಸಾ ಯೋಜನೆಯನ್ನು ಪ್ರಸಕ್ತ 43 ರಾಷ್ಟ್ರಗಳಿಂದ 150 ರಾಷ್ಟ್ರಗಳಿಗೆ ವಿಸ್ತರಣೆ

* 2016ರ ಏಪ್ರಿಲ್ 1ರಿಂದ ಜಿಎಸ್‌ಟಿ ಜಾರಿ

*ಜಿಎಸ್‌ಟಿ ಮೂಲಕ ರೂ 14.5 ಲಕ್ಷ ಕೋಟಿ ನಿರೀಕ್ಷೆ

*ರಕ್ಷಣಾ ಕ್ಷೇತ್ರಕ್ಕೆ ರೂ 2,46,727 ಕೋಟಿ ಬಿಡುಗಡೆ

* ನರೇಗಾ ಯೋಜನೆಗೆ 34,699 ಕೋಟಿ ರೂಪಾಯಿ

* 2015–16ರಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ರೂ. 25 ಸಾವಿರ ಕೋಟಿ

* 2015–16ನೇ ಸಾಲಿನಲ್ಲಿ ರಾಜ್ಯಗಳಿಗೆ ಕೇಂದ್ರಿಯ ತೆರಿಗೆಗಳಿಂದ 5.24 ಲಕ್ಷ ಕೋಟಿ

* ಪ್ರಧಾನಿ ನೀರಾವರಿ ಯೋಜನೆಗೆ 3 ಸಾವಿರ ಕೋಟಿ ರೂಪಾಯಿ

* ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ 208 ಕೋಟಿ ರೂಪಾಯಿ

* ಸಿಬಿಐಗೆ 565.39 ಕೋಟಿ ರೂಪಾಯಿ

* ಲೋಕಪಾಲಗೆ 7.18 ಕೋಟಿ; ಸಿವಿಸಿಗೆ 27.68 ಕೋಟಿ ರೂಪಾಯಿ

* ಮಕ್ಕಳ ಸಮಗ್ರ ರಕ್ಷಣಾ ಯೋಜನೆಗೆ 500 ಕೋಟಿ ರೂಪಾಯಿ

* ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಗೆ 1500 ಕೋಟಿ ರೂಪಾಯಿ

* ವಿದ್ಯುತ್‌ ಚಾಲಿತ ವಾಹನ ತಯಾರಿಕೆ ಉತ್ತೇಜಿಸಲು ರೂ 75 ಕೋಟಿ

*ಬಂಡವಾಳ ಹರಿವಿನ ಮೇಲೆ ನಿಯಂತ್ರಣಕ್ಕಾಗಿ ‘ಫೆಮಾ’ಗೆ ತಿದ್ದುಪಡಿ

* ಶೀಘ್ರವೇ ಪ್ರಧಾನಿ ಸುರಕ್ಷಾ ಯೋಜನೆಯಡಿ 2 ಲಕ್ಷ ಮೊತ್ತದ ಅಪಘಾತ ವಿಮೆ

* 2015–16ರಲ್ಲಿ ಮಹಿಳೆಯರಿಗಾಗಿ 79,258 ಕೋಟಿ ರೂಪಾಯಿ

* ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿ ಯುವಕ–ಯುವತಿಯರಿಗಾಗಿ ಶಿಕ್ಷಣ ಕಲ್ಯಾಣ ಯೋಜನೆ ‘ನಯಿ ಮಂಜಿಲ್’ ಸ್ಥಾಪನೆ

* ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ್ ಸೇವೆ

* 9 ಸಾವಿರ ಕೋಟಿ ರೂಪಾಯಿಗಳಲ್ಲಿ ಹಿರಿಯ ನಾಗರಿಕರ ಕಲ್ಯಾಣ ನಿಧಿ ಸ್ಥಾಪನೆಗೆ ಪ್ರಸ್ತಾವ

*ರಸ್ತೆ ಮತ್ತು ರೈಲು ಯೋಜನೆಗಳಲ್ಲಿ ಹೂಡಿಕೆ ಉತ್ತೇಜನಕ್ಕೆ ತೆರಿಗೆ ರಹಿತ ಮೂಲಸೌಕರ್ಯ ಬಾಂಡ್ ಗಳ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.