ನವದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆ ವೇಳೆ ಔಷಧ ಅಂಗಡಿಯೊಂದಕ್ಕೆ ಗುಂಪೊಂದು ಬೆಂಕಿ ಹಚ್ಚಿದ್ದ ಪ್ರಕರಣದ ಒಂಬತ್ತು ಆರೋಪಿಗಳನ್ನು ಇಲ್ಲಿಯ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ. ಆರೋಪಿಗಳ ದೋಷ ಸಾಬೀತುಗೊಳಿಸಲು ಕೇವಲ ಒಬ್ಬ ಸಾಕ್ಷಿಯ ರುಜುವಾತು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
‘ಒಂಬತ್ತು ಆರೋಪಿಗಳೇ ತಪ್ಪಿತಸ್ಥರು ಎಂಬ ಅನುಮಾನದ ಹೊರತಾಗಿ ಆರೋಪ ಸಾಬೀತು ಮಾಡಲು ಬೇರೆ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ. ಹೀಗಾಗಿ ಆರೋಪಿಗಳನ್ನು ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಖುಲಾಸೆ ಮಾಡಲಾಗಿದೆ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಆದೇಶ ನೀಡಿದ್ದಾರೆ.
2020ರ ಫಬ್ರುವರಿ 25ರಂದು ದೆಹಲಿ ಗಲಭೆ ವೇಳೆ ಭಾಗೀರತಿ ವಿಹಾರ ಪ್ರದೇಶದ ಮೈನ್ ಬ್ರಿಜ್‌ಪುರಿ ರಸ್ತೆಯ ಔಷಧ ಅಂಗಡಿಯೊಂದಕ್ಕೆ ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿತ್ತು. ಒಂಬತ್ತು ಜನರ ಮೇಲೆ ಆರೋಪ ಹೊರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.