ADVERTISEMENT

2021 ಜಲಶಕ್ತಿ ಸಚಿವಾಲಯಕ್ಕೆ ‘ಐತಿಹಾಸಿಕ’: ಗಜೇಂದ್ರ ಸಿಂಗ್ ಶೆಖಾವತ್‌

ಪಿಟಿಐ
Published 22 ಡಿಸೆಂಬರ್ 2021, 16:38 IST
Last Updated 22 ಡಿಸೆಂಬರ್ 2021, 16:38 IST
ಗಜೇಂದ್ರ ಸಿಂಗ್ ಶೆಖಾವತ್ 
ಗಜೇಂದ್ರ ಸಿಂಗ್ ಶೆಖಾವತ್    

ನವದೆಹಲಿ: ಜಲಶಕ್ತಿ ಸಚಿವಾಲಯಕ್ಕೆ 2021 ವರ್ಷವು ‘ಐತಿಹಾಸಿಕ’ ವರ್ಷವಾಗಿದೆ. ಏಕೆಂದರೆ ಹಲವು ಮಹತ್ವದ ನಿರ್ಧಾರಗಳನ್ನು ಈ ವರ್ಷ ತೆಗೆದುಕೊಳ್ಳಲಾಗಿದ್ದು, ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಬುಧವಾರ ಹೇಳಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಕಲ್ಪಿಸುವುದು ಮುಂದಿನವರ್ಷದ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ಜಲಜೀವನ ಮಿಷನ್‌ನಿಂದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಯೋಜಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಮಾತನಾಡಿದ ಅವರು, ‘ಈ ವರ್ಷವು ಜಲಶಕ್ತಿ ಸಚಿವಾಲಯದ ಪಾಲಿಗೆ ನಿಜಕ್ಕೂ ಐತಿಹಾಸಿಕವಾದುದು. ದೀರ್ಘಕಾಲದಿಂದ ಬಾಕಿ ಉಳಿದಿದ್ದ ನದಿಗಳ ಜೋಡಣೆಯ ಯೋಜನೆಯ ವಿಚಾರದಲ್ಲಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಜತೆಗಿನ ಒಪ್ಪಂದವನ್ನು ಪೂರ್ಣಗೊಳಿಸಲಾಗಿದೆ’ ಎಂದರು.

ADVERTISEMENT

‘ಅಣೆಕಟ್ಟು ಸುರಕ್ಷತೆಗೆ ಸಂಬಂಧಿಸಿದ ಕಾನೂನನ್ನು ಜಾರಿಗೊಳಿಸಿದ್ದರಿಂದ ಜಲಶಕ್ತಿ ಸಚಿವಾಲಯಕ್ಕೆ 2021 ವರ್ಷವು ಬಹಳ ಮಹತ್ವದ್ದಾಗಿದೆ’ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.