ADVERTISEMENT

ಪಂಜಾಬ್‌: 22 ರೈತ ಸಂಘಟನೆಗಳಿಂದ ರಾಜಕೀಯ ಪಕ್ಷ ಘೋಷಣೆ, ಚುನಾವಣಾ ಅಖಾಡಕ್ಕೆ!

ಪಿಟಿಐ
Published 25 ಡಿಸೆಂಬರ್ 2021, 14:14 IST
Last Updated 25 ಡಿಸೆಂಬರ್ 2021, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದ ಪಂಜಾಬ್‌ನ 22 ರೈತ ಸಂಘಟನೆಗಳು ಹೊಸ ರಾಜಕೀಯ ಪಕ್ಷವನ್ನುಘೋಷಿಸಿದ್ದು, ಮುಂಬರುವ ಚುನಾವಣೆಯಲ್ಲಿ ಅಖಾಡಕ್ಕಿಳಿಯಲು ನಿರ್ಧರಿಸಿವೆ.

ಹೊಸ ರಾಜಕೀಯ ಪಕ್ಷಕ್ಕೆ 'ಸಂಯುಕ್ತ ಸಮಾಜ ಮೋರ್ಚಾ' ಎಂದು ಹೆಸರಿಸಲಾಗಿದ್ದು, ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದೆ.

ಪಂಜಾಬ್‌ನ ರೈತ ಒಕ್ಕೂಟದಲ್ಲಿ ಈ 22 ರೈತ ಸಂಘಟನೆಗಳು ಸೇರಿವೆ. ಈ ಪೈಕಿ22 ರೈತ ಸಂಘಟನೆಗಳು ಹೊಸ ರಾಜಕೀಯ ಪಕ್ಷ ಘೋಷಿಸಿವೆ. ಕಳೆದೊಂದು ವರ್ಷದಿಂದ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ADVERTISEMENT

ಈ ಕುರಿತು ಸಂಘಟನೆಯ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು, ಪಂಜಾಬ್ ವಿಧಾನಸಭೆಯ ಎಲ್ಲ 117 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಏತನ್ಮಧ್ಯೆ ರೈತ ಪ್ರತಿಭಟನೆಗೆ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇತ್ತೀಚೆಗಷ್ಟೇ ರೈತರ ದೃಢ ಸಂಕಲ್ಪಕ್ಕೆ ಮಣಿದ ಕೇಂದ್ರ ಸರ್ಕಾರವು ಕೊನೆಗೂ ವಿವಾದಿತ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.