ADVERTISEMENT

ಮುಂಬೈ ನಗರದಲ್ಲಿ 29 ರಾಜಹಂಸಗಳು ಅನುಮಾನಾಸ್ಪದ ರೀತಿಯಲ್ಲಿ ಸಾವು

ಪಿಟಿಐ
Published 21 ಮೇ 2024, 4:55 IST
Last Updated 21 ಮೇ 2024, 4:55 IST
   

ಮುಂಬೈ: ಮುಂಬೈ ಘಾಟ್ಕೊಪಾರ್‌ನ ಹಲವೆಡೆ 28 ರಾಜಹಂಸಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿವೆ ಎಂದು ವನ್ಯಜೀವಿಗಳ ಹೋರಾಟಗಾರರ ಸಮುದಾಯ ತಿಳಿಸಿದೆ.

ಘಾಟ್ಕೊಪಾರ್‌ನ ವಿವಿಧೆಡೆ ಸತ್ತ ಪಕ್ಷಿಗಳು ಕಂಡುಬಂದಿರುವ ಬಗ್ಗೆ ಜನರು ಕರೆ ಮಾಡಿ ತಿಳಿಸುತ್ತಿದ್ದಾರೆ ಎಂದು ವನ್ಯಜೀವಿಗಳ ರಕ್ಷಣೆಗಾಗಿ ಕೆಲಸ ಮಾಡುವ ರೆಸ್ಟಿಂಕ್ ಪ್ರತಿಷ್ಠಾನದ ಸಂಸ್ಥಾಪಕ ಪವನ್ ಸಿಂಗ್ ಹೇಳಿದ್ದಾರೆ.

ಈ ಸಂಬಂಧ ಅರಣ್ಯ ಇಲಾಖೆ ಮತ್ತು ರೆಸ್ಟಿಂಕ್ ಪ್ರತಿಷ್ಠಾನದ ಜಂಟಿ ಶೋಧ ಕಾರ್ಯಾಚರಣೆ ವೇಳೆ 29 ಸತ್ತ ರಾಜಹಂಸಗಳು ಪತ್ತೆಯಾಗಿವೆ. ಪಕ್ಷಿಗಳ ಕಳೇಬರವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ಕಾರಣ ತಿಳಿದುಬರಲಿದೆ.

ADVERTISEMENT

ಮೇ 13ರಂದು ಇದೇ ವಲಯದ ಛೇಡಾ ನಗರ ಪ್ರದೇಶದಲ್ಲಿ ಬೃಹತ್‌ ಜಾಹೀರಾತು ಫಲಕ ಉರುಳಿ ಬಿದ್ದು ಅದರಡಿ ಸಿಲುಕಿ 16 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.