ಅಹಮದಾಬಾದ್: ಗುಜರಾತ್‌ನ ಗಿರ್ ಅರಣ್ಯದಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಶೇ 29ರಷ್ಟು ಹೆಚ್ಚಳವಾಗಿದೆ. ಅವುಗಳ ಸಂಖ್ಯೆ ಈಗ 674 ಆಗಿದೆ ಎಂದು ಅರಣ್ಯ ಇಲಾಖೆ ಬುಧವಾರ ತಿಳಿಸಿದೆ. ಇದು ಈ ವರೆಗೆ ದಾಖಲಾದ ಗರಿಷ್ಠ ಹೆಚ್ಚಳವಾಗಿದೆ.
ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಮುದಾಯದ ಪಾಲುದಾರಿಕೆಯೇ ಕಾರಣ’ ಎಂದು ಶ್ಲಾಘಿಸಿದ್ದಾರೆ.
ಹುಣ್ಣಿಮೆ ದಿನವಾದ ಜೂನ್ 5 ಹಾಗೂ 6ರ ರಾತ್ರಿ ವೇಳೆ ಇಲಾಖೆ ಗಣತಿ ಕಾರ್ಯ ಕೈಗೊಂಡಿತ್ತು. ಪ್ರತಿ ಐದು ವರ್ಷಕ್ಕೊಮ್ಮೆ ಮೇ ತಿಂಗಳಲ್ಲಿ ನಡೆಯುವ ಎಣಿಕೆ ಕಾರ್ಯವನ್ನು ಈ ಬಾರಿ ಕೋವಿಡ್–19ನಿಂದಾಗಿ ಕೈಗೊಂಡಿರಲಿಲ್ಲ
2015ರ ಗಣತಿ ಪ್ರಕಾರ 523 ಸಿಂಹಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.