ಬರೇಲಿ/ಲಖನೌ: ಕೂದಲು ತಿನ್ನುವ ಅಭ್ಯಾಸ ಹೊಂದಿದ್ದ 21 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಶೇಖರಣೆಯಾಗಿದ್ದ 2 ಕೆ.ಜಿ ಕೂದಲನ್ನು ಬರೇಲಿಯಲ್ಲಿ ವೈದ್ಯರು ಹೊರತೆಗೆದಿದ್ದಾರೆ.
ತಮ್ಮದೇ ಕೂದಲನ್ನು ಕಿತ್ತು ತಿನ್ನುವ ಮನೋರೋಗವನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರೈಕೋಫಾಜಿಯಾ’ ಅಥವಾ ‘ರುಪುಂಜೆಲ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ.
ತೀವ್ರ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ನಂತರ ಮಹಿಳೆಯು ಸೆ.20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಿ.ಟಿ ಸ್ಕ್ಯಾನ್‌ನಲ್ಲಿ ಹೊಟ್ಟೆಯೊಳಗೆ ಕೂದಲು ಇರುವುದು ಪತ್ತೆಯಾಗಿತ್ತು. ನಂತರ ಮಹಿಳೆಯೊಂದಿಗೆ ಸಮಾಲೋಚನೆ ನಡೆಸಿದಾಗ 16 ವರ್ಷದಿಂದ ಕೂದಲು ತಿನ್ನುವ ಅಭ್ಯಾಸ ಇರುವುದಾಗಿ ಹೇಳಿಕೊಂಡಿದ್ದರು. ಸೆಪ್ಟೆಂಬರ್ 26ರಂದು ಶಸ್ತ್ರಚಿಕಿತ್ಸೆ ಮೂಲಕ ಕೂದಲನ್ನು ಹೊರತೆಗೆಯಲಾಯಿತು ಎಂದು ವೈದ್ಯರು ತಿಳಿಸಿದರು.
ಮಹಿಳೆಗೆ ಆಸ್ಪತ್ರೆಯಲ್ಲಿ ಸಮಾಲೋಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.