ADVERTISEMENT

ಕಂದಕಕ್ಕೆ ಉರುಳಿದ ಟ್ರಕ್: ಮೂವರು ಯೋಧರ ಸಾವು, ಮೂವರಿಗೆ ಗಂಭೀರ ಗಾಯ

ಪಿಟಿಐ
Published 30 ಜೂನ್ 2021, 14:06 IST
Last Updated 30 ಜೂನ್ 2021, 14:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗ್ಯಾಂಗ್ಟಾಕ್: ಯೋಧರು ಪ್ರಯಾಣಿಸುತ್ತಿದ್ದ ಟ್ರಕ್‌ ಕಂದಕಕ್ಕೆ ಉರುಳಿದ ಪರಿಣಾಮವಾಗಿ ಮೂವರು ಸೈನಿಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೂರ್ವ ಸಿಕ್ಕಿಂನಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

ನ್ಯೂ ಜವಾಹರ್ ಲಾಲ್ ನೆಹರು ರಸ್ತೆಯ 6 ನೇ ಮೈಲಿನಲ್ಲಿ ಈ ಅಪಘಾತ ಸಂಭವಿಸಿದ್ದು, ಇದು ಗ್ಯಾಂಗ್ಟಾಕ್ ಅನ್ನು ಸೋಮ್ಗೊ ಸರೋವರ ಮತ್ತು ಭಾರತ-ಚೀನಾ ಗಡಿಯ ಸಮೀಪವಿರುವ ನಾಥುಲಾವನ್ನು ಸಂಪರ್ಕಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಮಾನ್ ರೆಜಿಮೆಂಟ್‌ನ ಆರು ಜನ ಯೋಧರು ಗ್ಯಾಂಗ್ಟಾಕ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ 600 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಈ ವೇಳೆ ಚಾಲಕ ಮತ್ತು ಇತರ ಇಬ್ಬರು ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಸೇನೆ, ಬಿಆರ್‌ಒ, ಪೊಲೀಸರು ಮತ್ತು ಸ್ಥಳೀಯರು ಪ್ರತಿಕೂಲ ಹವಾಮಾನದ ನಡುವೆಯೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಬದುಕುಳಿದಿರುವ ಮೂವರನ್ನು ಗ್ಯಾಂಗ್ಟಾಂಕ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಅವರನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿನ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.