ಶ್ರೀನಗರ (ಪಿಟಿಐ): ಕುಲ್ಗಾಂ ಜಿಲ್ಲೆಯ ಮೂವರು ಬಿಜೆಪಿ ಕಾರ್ಯಕರ್ತರನ್ನು ಉಗ್ರರು ಗುರುವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಿದಾ ಹುಸೈನ್, ಉಮರ್ ಹಜಾಮ್ ಮತ್ತು ಉಮರ್ ರಶೀದ್ ಬೇಗ್ ಮೃತರು. ಇಲ್ಲಿನ ವೈ.ಕೆ.ಪೊರಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಮೂವರನ್ನು ಖಾಜಿಗುಂದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲಷ್ಕರ್ ಎ ತೊಯಬಾ ಭಯೋತ್ಪಾದಕ ಸಂಘಟನೆ ಜೊತೆಗೆ ಗುರುತಿಸಿಕೊಂಡಿರುವ ‘ದ ರೆಸಿಸ್ಟನ್ಸ್ ಫ್ರಂಟ್’ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ‘ಸ್ಮಶಾನವು ತುಂಬಿ ತುಳಕಲಿದೆ’ ಎಂದು ಬರೆದುಕೊಂಡಿದೆ.
ಜೂನ್‌ನಿಂದ ಇಲ್ಲಿಯವರೆಗೆ 8 ಮಂದಿ ಬಿಜೆಪಿ ಕಾರ್ಯಕರ್ತರನ್ನುಉಗ್ರರು ಹತ್ಯೆ ಮಾಡಿದ್ದಾರೆ. ಕಳೆದ ಜುಲೈನಲ್ಲಿ ಬಂಡಿಪೊರದ ಬಿಜೆಪಿ ಮುಖಂಡ ಮತ್ತು ಕುಟುಂಬದ ಇಬ್ಬರು ಸದಸ್ಯರನ್ನು ಉಗ್ರರು ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.