ಪುಣೆ : ಪುಣೆ ಜಿಲ್ಲೆಯ ಪಿಂಪ್ರಿ–ಚಿಂಚವಡ ಪ್ರದೇಶದಲ್ಲಿ ಭೂಮಿಯನ್ನು ಅಗೆಯುತ್ತಿದ್ದ ವೇಳೆ ಬಾಂಬ್ ರೀತಿಯ ಮೂರು ವಸ್ತುಗಳು ಪತ್ತೆಯಾಗಿವೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
‘ಚಿಂಚವಡದಲ್ಲಿ ಸೋರುತ್ತಿದ್ದ ಪೈಪ್ಲೈನ್ ಅನ್ನು ಸರಿಪಡಿಸಲು ಭೂಮಿಯನ್ನು ಅಗೆಯುತ್ತಿದ್ದ ವೇಳೆ ಬಾಂಬ್ ರೀತಿಯ ವಸ್ತುಗಳು ಬುಧವಾರ ಪತ್ತೆಯಾಗಿದ್ದು, ಹೆಚ್ಚಿನ ತಪಾಸಣೆಗಾಗಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಕ್ಕೆ (ಬಿಡಿಡಿಎಸ್) ಹಸ್ತಾಂತರಿಸಲಾಗಿದೆ’ ಎಂದು ಪಿಂಪ್ರಿ–ಚಿಂಚವಡ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.