ADVERTISEMENT

ಶ್ರೀನಗರ: ಪೊಲೀಸ್ ಮೇಲೆ ದಾಳಿ ಮಾಡಿದ್ದ ಮೂವರು 'ಹೈಬ್ರಿಡ್' ಭಯೋತ್ಪಾದಕರ ಬಂಧನ

ಪಿಟಿಐ
Published 17 ಡಿಸೆಂಬರ್ 2023, 6:52 IST
Last Updated 17 ಡಿಸೆಂಬರ್ 2023, 6:52 IST
   

ಶ್ರೀನಗರ: ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಕಳೆದ ವಾರ ಪೊಲೀಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ‘ಹೈಬ್ರಿಡ್’ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್. ಆರ್. ಸ್ವೈನ್ ಭಾನುವಾರ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್‌ಸ್ಟೆಬಲ್ ಮೊಹಮ್ಮದ್ ಹಫೀಜ್ ಚಾಕ್ ಮೇಲೆ ಹಲ್ಲೆ ನಡೆಸಲಾಗಿತ್ತು.

ಪಾಕಿಸ್ತಾನ ಮೂಲದ ಭಯೋತ್ಪಾದಕ ಅರ್ಜುಮಂಡ್ ಅಲಿಯಾಸ್ ಹಮ್ಜಾ ಬುರ್ಹಾನ್ ಈ ದಾಳಿಯ ಸಂಚು ರೂಪಿಸಿದ್ದು, ಸ್ಥಳೀಯ ಮಾಸ್ಟರ್ ಮೈಂಡ್ ಡ್ಯಾನಿಶ್ ಅಹ್ಮದ್ ಮಲ್ಲಾ ಅವರೊಂದಿಗೆ ಸಂಪರ್ಕ ಹೊಂದಿದ್ದ ಎಂದು ಡಿಜಿಪಿ ಹೇಳಿದರು.

ADVERTISEMENT

ಪೊಲೀಸ್ ಮೇಲೆ ದಾಳಿ ಮಾಡಿದ ಹೈಬ್ರಿಡ್ ಭಯೋತ್ಪಾದಕರು ನಂತರ ತಮ್ಮ ನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.