ADVERTISEMENT

ಛತ್ತೀಸಗಢ | ವಾಮಾಚಾರ ಶಂಕೆ: ಮಹಿಳೆಯರು ಸೇರಿ ಐವರನ್ನು ಥಳಿಸಿ ಕೊಂದ ಗ್ರಾಮಸ್ಥರು

ಪಿಟಿಐ
Published 15 ಸೆಪ್ಟೆಂಬರ್ 2024, 12:58 IST
Last Updated 15 ಸೆಪ್ಟೆಂಬರ್ 2024, 12:58 IST
<div class="paragraphs"><p>ವಾಮಾಚಾರ (ಪ್ರಾತಿನಿಧಿಕ ಚಿತ್ರ)&nbsp;</p></div>

ವಾಮಾಚಾರ (ಪ್ರಾತಿನಿಧಿಕ ಚಿತ್ರ) 

   

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಶಂಕಿಸಿ ಐವರನ್ನು ಥಳಿಸಿ ಕೊಂದಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ದಂಪತಿಗಳು ಮತ್ತು ಓರ್ವ ಮಹಿಳೆಯನ್ನು ಥಳಿಸಿ ಹತ್ಯೆ ಮಾಡಿದ್ದು, ಗ್ರಾಮದ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಆರೋಪಿಗಳನ್ನು ಸವ್ಲಾಮ್ ರಾಜೇಶ್ (21), ಸವ್ಲಾಮ್ ಹಿದ್ಮಾ, ಕರಮ್ ಸತ್ಯಂ (35), ಕುಂಜಮ್ ಮುಖೇಶ್ (28) ಮತ್ತು ಪೊಡಿಯಮ್ ಎಂದು ಗುರುತಿಸಲಾಗಿದೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಗುರುವಾರದಂದು (ಸೆಪ್ಟೆಂಬರ್‌ 12) ರಾಜ್ಯದ ಬಲೋಡಾ ಬಜಾರ್–ಬಾಟಾಪಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಶಂಕಿಸಿ ಅಪ್ರಾಪ್ತ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.