ADVERTISEMENT

ರಾಜಸ್ಥಾನದಲ್ಲಿ ಮತ್ತೆ 356 ಹಕ್ಕಿಗಳ ಸಾವು 

ಪಿಟಿಐ
Published 9 ಜನವರಿ 2021, 15:54 IST
Last Updated 9 ಜನವರಿ 2021, 15:54 IST
ಹಕ್ಕಿಗಳ ಸಾವು: ಪ್ರಾತಿನಿಧಿಕ ಚಿತ್ರ
ಹಕ್ಕಿಗಳ ಸಾವು: ಪ್ರಾತಿನಿಧಿಕ ಚಿತ್ರ   

ಜೈಪುರ: ದೇಶದಾದ್ಯಂತ ಹಕ್ಕಿ ಜ್ವರದ ಆತಂಕದ ನಡುವೆ ರಾಜಸ್ಥಾನದಲ್ಲಿ ಶನಿವಾರ ಮತ್ತೆ 356 ಹಕ್ಕಿಗಳು ಸಾವನ್ನಪ್ಪಿದ್ದು, ಇದು ಸೇರಿ ಇದುವರೆಗೆ ಒಟ್ಟು 2,512 ಹಕ್ಕಿಗಳು ಮೃತಪಟ್ಟಿವೆ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ.

ಶನಿವಾರ ಮೃತಪಟ್ಟ 356 ಹಕ್ಕಿಗಳ ಪೈಕಿ 257 ಕಾಗೆಗಳು, 29 ಪಾರಿವಾಳ, 16 ನವಿಲುಗಳು ಮತ್ತು 54 ಇತರೆ ಪಕ್ಷಿಗಳು ಸೇರಿವೆ.

ರಾಜ್ಯದ 11 ಜಿಲ್ಲೆಗಳ 45 ಪ್ರಯೋಗಾಲಯ ಮಾದರಿಯಲ್ಲಿ ಹಕ್ಕಿ ಜ್ವರ ಕಂಡುಬಂದಿದೆ. ಆದರೆ, ಶನಿವಾರ ಯಾವುದೇ ಹಕ್ಕಿ ಜ್ವರದ ಪಾಸಿಟಿವ್ ವರದಿ ಬಂದಿಲ್ಲ ಎಂದು ಪಶುಸಂಗೋಪನೆ ಇಲಾಖೆ ತಿಳಿಸಿದೆ.

ಇಲ್ಲಿಯವರೆಗೆ ರಾಜ್ಯದಲ್ಲಿ 1963 ಕಾಗೆಗಳು, 152 ನವಿಲುಗಳು ಮತ್ತು 122 ಪಾರಿವಾಳಗಳು ಮೃತಪಟ್ಟಿವೆ ಎಂದು ಪಿಟಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.