ADVERTISEMENT

ಮಣಿಪುರ ಹಿಂಸಾಚಾರ | 3,583 ಮಂದಿಗೆ ಮಿಜೋರಾಂನಲ್ಲಿ ತಾತ್ಕಾಲಿಕ ಆಶ್ರಯ

ಪಿಟಿಐ
Published 11 ಮೇ 2023, 5:56 IST
Last Updated 11 ಮೇ 2023, 5:56 IST
ಹಿಂಸಾಚಾರ ಪೀಡಿತ ಮಣಿಪುರ
ಹಿಂಸಾಚಾರ ಪೀಡಿತ ಮಣಿಪುರ    

ಐಜ್ವಾಲ್ : ಹಿಂಸಾಚಾರದಿಂದ ಕಂಗೆಟ್ಟಿದ್ದ ಮಣಿಪುರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಇಲ್ಲಿಯವರೆಗೆ ಸುಮಾರು 3,583 ಮಂದಿಗೆ ಮಿಜೋರಾಂನಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಜೋರಾಂ ಆರು ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಕೇಂದ್ರಗಳನ್ನು ಸ್ಥಾ‍ಪಿಸಲಾಗಿದ್ದು, ಅಲ್ಲಿ ಕೆಲವರಿಗೆ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ. ಇನ್ನು ಉಳಿದ ಕೆಲವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಒಟ್ಟು 1,351 ಜನರು, ಸೈಚುವಲ್ ಜಿಲ್ಲೆಯಲ್ಲಿ 1,214 ಜನರು ಮತ್ತು ಐಜ್ವಾಲ್ ಜಿಲ್ಲೆಯಲ್ಲಿ 934 ಜನರು ಆಶ್ರಯ ಪಡೆದಿದ್ದಾರೆ. ಉಳಿದ 84 ಜನರಿಗೆ ಚಾಂಫೆ, ಸೆರ್ಚಿಪ್ ಮತ್ತು ಖವಾಜ್ವಾಲ್ ಜಿಲ್ಲೆಗಳಲ್ಲಿ ಆಶ್ರಯ ಒದಗಿಸಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಇಂಫಾಲ್‌ ಕಣಿವೆಯಲ್ಲಿ ವಾಸಿಸುತ್ತಿರುವ ಮೈತೇಯಿ ಸಮುದಾಯವು ತಮಗೆ ಎಸ್‌ಟಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಡ ತಂದಿದೆ. ಮೈತೇಯಿ ಸಮುದಾಯದವರ ಮೀಸಲಾತಿ ಬೇಡಿಕೆಯನ್ನು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ವಿರೋಧಿಸಿವೆ.

ಮೈತೇಯಿ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಲು ಸರ್ಕಾರ ಒಲವು ತೋರಿರುವುದನ್ನು ಖಂಡಿಸಿ ಕುಕಿ ಮತ್ತು ನಾಗಾ ಬುಡಕಟ್ಟು ಜನರು ಇಂಫಾಲ್‌ನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದರು. ಈ ಮೆರವಣಿಗೆ ವೇಳೆ ಕಣಿವೆ ಜನರು ಮತ್ತು ಗುಡ್ಡಗಾಡು ಜನರ ನಡುವೆ ಹಿಂಸಾಚಾರ ನಡೆದಿದೆ.

ಹಿಂಸಾಚಾರದಲ್ಲಿ ಒಟ್ಟು 60 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.