ADVERTISEMENT

ಹೊಸ ಕ್ರಿಮಿನಲ್‌ ಕಾನೂನುಗಳ ಜಾರಿ ತಡೆಯಲು ಆಗ್ರಹ

ರಾಜಕೀಯ ನಾಯಕರ ಒತ್ತಾಯಿಸುವ ಮನವಿಗೆ 3,695 ಜನರಿಂದ ಸಹಿ

ಪಿಟಿಐ
Published 19 ಜೂನ್ 2024, 16:21 IST
Last Updated 19 ಜೂನ್ 2024, 16:21 IST
-
-   

ನವದೆಹಲಿ: ‘ನೂತನ ಕ್ರಿಮಿನಲ್‌ ಕಾನೂನುಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಕೂಡಲೇ ಮಧ್ಯಪ್ರವೇಶಿಸಿ, ಅವುಗಳ ಅನುಷ್ಠಾನ ತಡೆಯಬೇಕು’ ಒಂದು 3,895 ನಾಗರಿಕರು ‘ಇಂಡಿಯಾ’ ಒಕ್ಕೂಟ ಹಾಗೂ ಎನ್‌ಡಿಎ ಅಂಗಪಕ್ಷಗಳ ಮುಖಂಡನ್ನು ಒತ್ತಾಯಿಸಿದ್ದಾರೆ.

ಈ ಬೇಡಿಕೆಯುಳ್ಳ ಮನವಿ ಪತ್ರವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ  ಹಾಗೂ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ ಚೌಧರಿ ಅವರಿಗೆ ಬರೆಯಲಾಗಿದ್ದು, ಅದರ ಪ್ರತಿಗಳನ್ನು ವಿವಿಧ ಪಕ್ಷಗಳಿಗೆ ಕಳುಹಿಸಲಾಗಿದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ಪಕ್ಷಗಳ ಮುಖಂಡರಿಗೂ ಈ ಪತ್ರವನ್ನು ಕಳುಹಿಸಲಾಗಿದೆ.

ADVERTISEMENT

ತುಷಾರ್‌ ಗಾಂಧಿ, ತನಿಕಾ ಸರ್ಕಾರ್, ಹೆನ್ರಿ ಟಿಫಾಗ್ನೆ, ಮೇಜರ್ ಜನರಲ್ (ನಿವೃತ್ತ) ಸುಧೀರ್‌ ವೊಂಬತ್ಕೆರೆ, ತೀಸ್ತಾ ಸೆಟಲ್ವಾಡ್, ಕವಿತಾ ಶ್ರೀವಾಸ್ತವ ಹಾಗೂ ಶಬನಮ್ ಹಷ್ಮಿ ಈ ಪತ್ರಕ್ಕೆ ಸಹಿ ಹಾಕಿರುವ ಪ್ರಮುಖರು.

ಈ ಹೊಸ ಕ್ರಿಮಿನಲ್‌ ಕಾನೂನುಗಳ ಕುರಿತು ಸಂಸತ್‌ನಲ್ಲಿ ವಿಸ್ತೃತ ಚರ್ಚೆ ನಡೆಯಬೇಕು. ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಹಾಗೂ ಕಾನೂನು ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023, ಭಾರತೀಯ ನ್ಯಾಯ ಸಂಹಿತಾ, 2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ, 2023 ಕುರಿತು ಈ ಪ್ರಮುಖರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ನೂತನ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.