ನವದೆಹಲಿ: ಆಮ್ಲಜನಕ ಸಾಗಣೆಗೆ ಬಳಸಲಾಗುವ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಶನಿವಾರ ಸಿಂಗಪುರದಿಂದ ಭಾರತಕ್ಕೆ ವಿಮಾನದ ಮೂಲಕ ಸಾಗಿಸಲು ಸಿದ್ಧತೆ ನಡೆದಿದೆ.
‘ಭಾರತೀಯ ವಾಯುಪಡೆಯ ಸಿ–17 ವಿಮಾನದ ಮೂಲಕ ನಾಲ್ಕು ಖಾಲಿ ಟ್ಯಾಂಕ್‌ಗಳನ್ನು ಭಾರತಕ್ಕೆ ತರಲಾಗುತ್ತಿದೆ. ಅದಕ್ಕಾಗಿ ಶನಿವಾರ ಬೆಳಿಗ್ಗೆ ಈ ವಿಮಾನ ಇಲ್ಲಿನ ಹಿಂಡನ್ ವಾಯುನೆಲೆಯಿಂದ ಸಿಂಗಪುರದ ಚಂಗಿ ವಿಮಾನ ನಿಲ್ದಾಣಕ್ಕೆ ತೆರಳಿದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
‘ಟ್ಯಾಂಕ್‌ಗಳನ್ನು ಹೊತ್ತು ತರುವ ವಿಮಾನವು ಪಶ್ಚಿಮ ಬಂಗಾಳದ ಪಾನಗಢ ವಾಯುನೆಲೆಯಲ್ಲಿ ಇಳಿಯುವ ಸಾಧ್ಯತೆಗಳಿವೆ’ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದರು.
‘ಸಿಂಗಪುರ ಮತ್ತು ಯುಎಇಯಿಂದ ಹೆಚ್ಚಿನ ಸಾಮರ್ಥ್ಯದ ಆಮ್ಲಜನಕ ಸಾಗಿಸುವ ಟ್ಯಾಂಕರ್‌ಗಳನ್ನು ಆಮದು ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.