ನವದೆಹಲಿ: ಒಟ್ಟು 494 ದೇಶೀಯ ವಿಮಾನಗಳಲ್ಲಿ38,078 ಜನರು ಗುರುವಾರ ಪ್ರಯಾಣಿಸಿದ್ದಾರೆಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕುಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಎಲ್ಲ ದೇಶೀಯ ವಿಮಾನಗಳನ್ನು ಮಾರ್ಚ್ 25ರಿಂದ ಮೇ 24ರವರೆಗೆ ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು.
ಮೇ 28ರಂದು ರಾತ್ರಿ 11: 59 ಗಂಟೆಯವರೆಗಿನದೇಶೀಯ ವಿಮಾನಯಾನದ ಅಂಕಿ ಅಂಶಗಳನ್ನು ಟ್ವೀಟ್ ಮೂಲಕ ನೀಡಿರುವ ಪುರಿ, '494 ವಿಮಾನಗಳು ನಿರ್ಗಮಿಸಿದ್ದು, 38,078 ಪ್ರಯಾಣಿಕರನ್ನು ಹೊತ್ತೊಯ್ದಿವೆ. 493 ವಿಮಾನಗಳು ಆಗಮಿಸಿದ್ದು 38,389 ಪ್ರಯಾಣಿಕರನ್ನು ಹೊತ್ತು ತಂದಿವೆ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.