ADVERTISEMENT

ಮುಂಬೈ | ಒಂದೇ ದಿನ ಐವರು ಬಾಲಕಿಯರು ನಾಪತ್ತೆ

ಪಿಟಿಐ
Published 5 ಫೆಬ್ರುವರಿ 2024, 7:48 IST
Last Updated 5 ಫೆಬ್ರುವರಿ 2024, 7:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ: iStock

ಠಾಣೆ: ಬೇರೆ ಬೇರೆ ಕುಟುಂಟಕ್ಕೆ ಸೇರಿದ ಐವರು ಬಾಲಕಿಯರು ಒಂದೇ ದಿನ ನಾಪತ್ತೆಯಾಗಿರುವ ಘಟನೆ ನವಿ ಮುಂಬೈನ ತಲೋಜಾದಲ್ಲಿ ನಡೆದಿದೆ.

ADVERTISEMENT

ಶನಿವಾರ ಬೆಳಿಗ್ಗೆ 14 ಮತ್ತು 16 ವರ್ಷದ ಇಬ್ಬರು ಸಹೋದರಿಯರು ಶಾಲೆಗೆ ತೆರಳಿದ್ದು, ಮನೆಗೆ ವಾಪಸ್ ಬಂದಿಲ್ಲ. ಮತ್ತೊಂದು ಘಟನೆಯಲ್ಲಿ 5, 7 ಮತ್ತು 14 ವರ್ಷದ ಮೂವರು ಸಹೋದರಿಯರು ತಲೋಜಾದಲ್ಲಿರುವ ತಮ್ಮ ಮನೆಯಿಂದಲೇ ಕಾಣೆಯಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಲಕಿಯರಿಗಾಗಿ ಹುಡುಕಾಟ ನಡೆಸಿದ್ದು, ಐಪಿಎಸ್‌ ಸೆಕ್ಷನ್‌ 363(ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.