ADVERTISEMENT

ನಿಷೇಧಿತ ವಸ್ತು ಮಾರಾಟ: ವಿಡಿಯೊ ಮಾಡಲು ಹೋದ ತಾಯಿ – ಮಕ್ಕಳ ಮೇಲೆ ದಾಳಿ, ಐವರ ಬಂಧನ

ಪಿಟಿಐ
Published 3 ಜೂನ್ 2024, 3:14 IST
Last Updated 3 ಜೂನ್ 2024, 3:14 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್‌ ಜಿಲ್ಲೆಯಲ್ಲಿ ನಿಷೇಧಿತ ವಸ್ತುಗಳ ಮಾರಾಟ ಮಾಡುತ್ತಿದ್ದ ಐದು ಮಂದಿ ಆರೋಪಿಗಳು, ಮಹಿಳೆ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಿದ್ದಾರೆ. ಆನಂದ್‌ ನಗರ್‌ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜುಬಾಯಿ ಎಂಬ ಮಹಿಳೆ ಮತ್ತು ಅವರ ಮಕ್ಕಳಾದ ಅದಿತ, ಪಲಾಕ್‌ ಗಾಯಗೊಂಡಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

'ಪ್ರಕರಣ ಸಂಬಂಧ ಚೇತನ್‌ ಪರ್ಮಾರ್‌, ಸಂತೋಷ್‌ ಪಗಾರೆ, ಗೋಲು ಪರ್ಮಾರ್‌, ಶಿವ ಮತ್ತು ಇನ್ನೊಬ್ಬನನ್ನು ಬಂಧಿಸಲಾಗಿದೆ. ಕೊಲೆ ಯತ್ನ ಹಾಗೂ ಇತರ ಆರೋಪಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆನಂದ್‌ ನಗರದಲ್ಲಿರುವ ಸರ್ಕಾರಿ ವಸತಿ ಪ್ರದೇಶದ ಹತ್ತಿರ ಸಂತ್ರಸ್ತರ ಮೇಲೆ ದಾಳಿ ನಡೆದಿದೆ' ಎಂದು ಹೆಚ್ಚುವರಿ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಟಿ.ಎಸ್‌. ಬಘೇಲ್‌ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಆರೋಪಿಗಳು ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ತಿಳಿಸುವುದಕ್ಕಾಗಿ ವಿಡಿಯೊ ಮಾಡಿಕೊಳ್ಳಲು ಹೋದಾಗ ತಮ್ಮ ಮೇಲೆ ದಾಳಿ ಮಾಡಲಾಯಿತು ಎಂದು ಸಂತ್ರಸ್ತರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.