ಚೆನ್ನೈ: ಅಕ್ರಮ ಮರಳುಗಾರಿಕೆ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳು ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು. ಸುಪ್ರಿಂ ಕೋರ್ಟ್ ಈ ಕುರಿತು ಏ. 2ರಂದು ನಿರ್ದೇಶನ ನೀಡಿತ್ತು.
ಜಿಲ್ಲಾಧಿಕಾರಿಗಳಾದ ವಿ.ಆರ್.ಸುಬ್ಬುಲಕ್ಷ್ಮಿ (ವೆಲ್ಲೂರು), ಎಂ.ತಂಗವೇಲ್ (ಕರೂರ್), ಆ್ಯನೆ ಮೇರಿ ಸ್ವರ್ಣಾ (ಅರಿಯಲೂರು), ಎಂ.ಪ್ರದೀಪ್ ಕುಮಾರ್ (ತಿರುಚಿನಾಪಳ್ಳಿ) ಮತ್ತು ದೀಪಕ್ ಜೇಕಬ್ (ತಂಜಾವುರು) ಅವರು ಇ.ಡಿ ಎದುರು ಹಾಜರಾದವರು.
ವಿಚಾರಣೆಗೆ ಹಾಜರಾಗದ ಅಧಿಕಾರಿಗಳ ಧೋರಣೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಏ. 25ರೊಳಗೆ ಹಾಜರಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.