ADVERTISEMENT

ಶೀಘ್ರ 5 ಕೋಟಿ ಕೋವ್ಯಾಕ್ಸಿನ್‌ ಡೋಸ್‌ಗಳ ಅವಧಿ ಪೂ‌ರ್ಣ: ಭಾರತ್‌ ಬಯೋಟೆಕ್‌ಗೆ ನಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2022, 9:30 IST
Last Updated 6 ನವೆಂಬರ್ 2022, 9:30 IST
   

ನವದೆಹಲಿ: ಕೋವಿಡ್‌ ಲಸಿಕೆಗೆ ಬೇಡಿಕೆ ಕುಸಿದಿದ್ದರಿಂದ ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ‘ಕೋವ್ಯಾಕ್ಸಿನ್‌‘ನ 5 ಕೋಟಿ ಡೋಸ್‌ಗಳ ಅವಧಿ ಮುಕ್ತಾಯಗೊಂಡು ಲಸಿಕೆಗಳು ‌ಹಾಳಾಗುವ ಹಂತಕ್ಕೆ ತಲುಪಿದೆ.

2023ರ ಆದಿಯಲ್ಲಿ 5 ಕೋಟಿ ಡೋಸ್‌ಗಳ ಅವಧಿ ಮುಕ್ತಾಯವಾಗಲಿದ್ದು, ಕಂಪನಿ ಭಾರೀ ಪ್ರಮಾಣದ ನಷ್ಟಕ್ಕೆ ತುತ್ತಾಗಲಿದೆ.

ಕೋವ್ಯಾಕ್ಸಿನ್‌ ಕಳೆದ ವರ್ಷದ ಎರಡನೇ ಅರ್ಧದಲ್ಲಿ ಬೇಡಿಕೆ ಕುಸಿಯಲು ಆರಂಭಿಸಿತ್ತು. ಹೀಗಾಗಿ ಈ ವರ್ಷದ ಪ್ರಾರಂಭದಲ್ಲಿ ಲಸಿಕೆ ಉತ್ಪಾದನೆ ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿತ್ತು.

ADVERTISEMENT

ವಾರ್ಷಿಕವಾಗಿ 100 ಕೋಟಿ ಡೋಸ್‌ ತಯಾರಿಸುವ ಸಾಮರ್ಥ್ಯ ಹೊಂದಿರುವ ಭಾರತ್‌ ಬಯೋಟೆಕ್‌ ಬಳಿ 20 ಕೋಟಿ ಡೋಸ್‌ಗಳ ದಸ್ತಾನು ಇದ್ದು, ಈ ಪೈಕಿ 5 ಕೋಟಿ ಡೋಸ್‌ಗಳ ಅವಧಿ 2023ರ ಆದಿಯಲ್ಲಿ ಮುಕ್ತಾಯವಾಗಲಿದೆ.

ಸದ್ಯ ಕೋವ್ಯಾಕ್ಸಿನ್‌ ಲಸಿಕೆಗೆ ಬೇಡಿಕೆ ಕುಸಿದಿದ್ದು, ಭಾರತ್‌ ಬಯೋಟೆಕ್‌ಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಲಿದೆ. ಆದರೆ ನಷ್ಟದ ಪ್ರಮಾಣ ಎಷ್ಟು ಎನ್ನುವುರದ ಬಗ್ಗೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.