ADVERTISEMENT

ತ್ರಿಪುರಾ: 500 ಉಗ್ರರು ಶರಣಾಗತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:13 IST
Last Updated 24 ಸೆಪ್ಟೆಂಬರ್ 2024, 16:13 IST
   

ಅಗರ್ತಲಾ: ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ (ಎನ್‌ಎಲ್‌ಎಫ್‌ಟಿ) ಮತ್ತು ಆಲ್‌ ತ್ರಿಪುರಾ ಟೈಗರ್‌ ಫೋರ್ಸ್‌ಗೆ (ಎಟಿಟಿಎಫ್‌) ಸೇರಿದ ಸುಮಾರು 500 ಉಗ್ರರು ಮಂಗಳವಾರ ಮುಖ್ಯಮಂತ್ರಿ ಮಾಣಿಕ್‌ ಸಹಾ ಎದುರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತರಾದರು.

ಸೆಪಹಿಜಾಲ ಜಿಲ್ಲೆಯ ಜಂಪುಯಿಜಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಣಿಕ್‌ ಸಹಾ ಅವರು ಉಗ್ರರನ್ನು ಮುಖ್ಯವಾಹಿನಿಗೆ ಸ್ವಾಗತಿಸಿದರು. ಈ ವೇಳೆ ಮಾತನಾಡಿ, ’ಉಗ್ರವಾದ ಯಾವುದೇ ಸಮಸ್ಯೆಗೆ ಪರಿಹಾರವಲ್ಲ‘ ಎಂದು ತಿಳಿಸಿದರು.

’ಈ ಸಾಮೂಹಿಕ ಶರಣಾಗತಿಯಿಂದ ಈಶಾನ್ಯ ರಾಜ್ಯವು ಉಗ್ರರಿಂದ ಮುಕ್ತ ಪ್ರದೇಶವಾಗಿದೆ‘ ಎಂದು ತಿಳಿಸಿದರು.

ADVERTISEMENT

ಮಂಗಳವಾರ 500 ಉಗ್ರರು ಶರಣಾಗಿದ್ದು, ಉಳಿದವರು ಮುಂದಿನ ದಿನಗಳಲ್ಲಿ ಶರಣಾಗಲಿದ್ದಾರೆ. ಶರಣಾಗತಿ ವೇಳೆ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸೆ.4ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದ ಬಳಿಕ ಉಗ್ರರ ಶರಣಾಗತಿ ನಡೆದಿದೆ. 

ಈ ಎರಡು ಉಗ್ರರ ಗುಂಪುಗಳು 1990ರಿಂದ ರಾಜ್ಯದಲ್ಲಿ ಸಾಕಷ್ಟು ವಿಧ್ವಂಸಕ ಕೃತ್ಯ ನಡೆಸಿದ್ದವು. ಇದರಿಂದಾಗಿ ಆದಿವಾಸಿಗಳಲ್ಲದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದರು. ಶರಣಾದ ಉಗ್ರರಿಗೆ ಪುಶ್ಚೇತನಕ್ಕಾಗಿ ಕೇಂದ್ರವು ₹250 ಕೋಟಿ ಹಣಕಾಸು ಪ್ಯಾಕೇಜ್‌ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.