ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ 50ನೇ ವರ್ಷಾಚರಣೆಯಅಂಗವಾಗಿ ಮುಕ್ತಿಜೋದ್ಧರು, ವೀರಾಂಗಣರು ಮತ್ತು ಭಾರತೀಯ ಸಶಸ್ತ್ರ ಪಡೆಗಳ ಬಲಿದಾನ ಹಾಗೂ ಒಗ್ಗಟ್ಟಿನ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.
'50ನೇ ವಿಜಯ ದಿವಸದಲ್ಲಿ ನಾನು ಮುಕ್ತಿಜೋದ್ಧರು, ವೀರಾಂಗಣರು ಮತ್ತು ಭಾರತೀಯ ಸಶಸ್ತ್ರ ಪಡೆಗಳ ಧೀರ ಯೋಧರ ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸುತ್ತೇನೆ. ನಾವೆಲ್ಲರೂ ಒಗ್ಗಟ್ಟಾಗಿ ದಬ್ಬಾಳಿಕೆ ಶಕ್ತಿಯನ್ನು ಸೋಲಿಸಿದ್ದೇವೆ. ಢಾಕಾದಲ್ಲಿ ರಾಷ್ಟ್ರಪತಿ ಅವರ ಉಪಸ್ಥಿತಿಯು ಪ್ರತಿಯೊಬ್ಬ ಭಾರತೀಯನಿಗೂ ವಿಶೇಷ ಮಹತ್ವದ್ದಾಗಿದೆ' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬಾಂಗ್ಲಾದೇಶ ವಿಮೋಚನೆಗಾಗಿ 1971 ಡಿಸೆಂಬರ್ 3ರಿಂದ 16ರ ವರೆಗೆ ಪಾಕಿಸ್ತಾನ ವಿರುದ್ಧ ಬಾರತ ಯುದ್ಧ ನಡೆಸಿತ್ತು.ಯುದ್ಧದಲ್ಲಿ ಸೋಲು ಅನುಭವಿಸಿದ್ದ ಪಾಕಿಸ್ತಾನವು ಶರಣಾಗಿತ್ತು. ಬಾಂಗ್ಲಾ ವಿಮೋಚನೆಯ 50ನೇ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಢಾಕಾಗೆ ತೆರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.