ADVERTISEMENT

paracetamol, pantoprazole ಸೇರಿ 52 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ

ಪಿಟಿಐ
Published 25 ಜೂನ್ 2024, 14:43 IST
Last Updated 25 ಜೂನ್ 2024, 14:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಿಟರ್ಸ್ ಚಿತ್ರ

ನವದೆಹಲಿ: ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಾಸಿಟಮಾಲ್, ಪ್ಯಾಂಟಾಪ್ರಜೋಲ್ ಸೇರಿದಂತೆ ಕೆಲ ಆ್ಯಂಟಿಬಯೋಟೆಕ್‌ಗಳು ಒಳಗೊಂಡು 52 ಔಷಧಗಳ ಮಾದರಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ರಾಷ್ಟ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಹೇಳಿದೆ.

ADVERTISEMENT

ಕಳಪೆ ಗುಣಮಟ್ಟದ ಹಣೆಪಟ್ಟಿ ಹೊತ್ತಿರುವುದರಲ್ಲಿ 22 ಔಷಧಗಳು ಹಿಮಾಚಲಪ್ರದೇಶದಲ್ಲಿ ತಯಾರಿಸಲಾಗುತ್ತಿದೆ ಎಂದು ಸಿಡಿಎಸ್‌ಸಿಒ ಬಿಡುಗಡೆ ಮಾಡಿರುವ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಹಿಮಾಚಲ ಪ್ರದೇಶದ ಜೊತೆಗೆ ಜೈಪುರ, ಹೈದರಾಬಾದ್, ವಗೋಡಿಯಾ, ವಡೋದರ, ಇಂದೋರ್ ಮುಂತಾದ ಕಡೆಗಳಿಂದ ಸ್ಯಾಂಪಲ್ ಪಡೆಯಲಾಗಿದೆ.

ಸಿಡಿಎಸ್‌ಸಿಒ ಗುಣಮಟ್ಟ ಪರೀಕ್ಷೆಯಲ್ಲಿ 52 ಔಷಧಗಳು ವಿಫಲವಾಗಿವೆ ಎಂದು ಜೂನ್ 20ರಂದು ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳ ಕಂಪನಿಗಳಿಗೆ ನೋಟಿಸ್ ಕಳುಹಿಸಲಾಗಿದ್ದು, ಅವುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳಪೆ ಗುಣಮಟ್ಟದ ಔಷಧಿಗಳ ಪಟ್ಟಿಯಲ್ಲಿ ಒತ್ತಡ, ಖಿನ್ನತೆಯ ಚಿಕಿತ್ಸೆಗೆ ಬಳಸುವ ಕ್ಲೋನಾಜೆಪಮ್ ಮಾತ್ರೆಗಳೂ ಇವೆ. ನೋವು ನಿವಾರಕ ಡೈಕ್ಲೊಫಿನಾಕ್, ಅಧಿಕ ರಕ್ತದೊತ್ತಡದ ಔಷಧ ಟೆಲ್ಮಿಸಾರ್ಟನ್, ಉಸಿರಾಟದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಆಂಬ್ರೋಕ್ಸಲ್, ಫ್ಲುಕನಜೋಲ್, ಆಂಟಿಫಂಗಲ್ ಮತ್ತು ಕೆಲವು. ಮಲ್ಟಿವಿಟಮಿನ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳು ಇದರಲ್ಲಿವೆ.

ಕಳೆದ ವರ್ಷ ಹಿಮಾಚಲಪ್ರದೇಶದ 120 ಔಷಧ ಕಂಪನಿಗಳ ಸ್ಯಾಂಪಲ್ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.