ADVERTISEMENT

ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ

ಪಿಟಿಐ
Published 30 ಜುಲೈ 2024, 11:35 IST
Last Updated 30 ಜುಲೈ 2024, 11:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸೂರತ್ (ಗುಜರಾತ್‌): ಸೂರತ್ ನಗರದ ಬೀದಿಗಳಲ್ಲಿ ಭಿಕ್ಷಾಟನೆ ಹಾಗೂ ಚಿಂದಿ ಆಯುತ್ತಿದ್ದ 53 ಮಕ್ಕಳನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಘಟಕದ (ಎಎಚ್‌ಟಿಯು) ಒಟ್ಟು 30 ತಂಡಗಳು ಒಂದು ತಿಂಗಳಿಂದ ಕಾರ್ಯಚರಣೆಯಲ್ಲಿ ತೊಡಗಿದ್ದವು.

ADVERTISEMENT

ಪೋಷಕರ ಸಲಹೆಯಂತೆ ಈ ಮಕ್ಕಳು ನಗರದ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.‌‌‌

ಈ ಮಕ್ಕಳು ಗುಜರಾತ್, ಬಿಹಾರ, ಮಹಾರಾಷ್ಟ್ರ ಮತ್ತು ರಾಜಸ್ಥಾನಕ್ಕೆ ಸೇರಿದವರು. ಅವರಲ್ಲಿ ಹೆಚ್ಚಿನವರು ತಮ್ಮ ಹೆತ್ತವರ ಸಲಹೆಯಂತೆ ಜೀವನೋಪಾಯಕ್ಕಾಗಿ ಚಿಂದಿ ಆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇವರಲ್ಲಿ ಕೆಲವು ಮಕ್ಕಳು ಅನಾಥರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.